ಕರ್ನಾಟಕ

karnataka

ETV Bharat / sitara

'ಕರುನಾಡೆ..' ಎಂದು ಕುಣಿದಿದ್ದ ರವಿಮಾಮ ಇದೀಗ 'ಕನ್ನಡಿಗ' - actor ravichandran news

ರವಿಚಂದ್ರನ್​​ ಕನ್ನಡಿಗ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಇದೀಗ ಸೆಟ್ಟೇರಿದ್ದು, ಎನ್.ಎಸ್. ರಾಜ್ ಕುಮಾರ್ ಬಂಡವಾಳ ಹಾಕುತ್ತಿದ್ದಾರೆ.

V ravaichandran playing lead role in kannadiga
'ಕರುನಾಡೆ..' ಎಂದು ಕುಣಿದಿದ್ದ ರವಿಮಾಮ ಇದೀಗ 'ಕನ್ನಡಿಗ'ನಾಗ್ತಿದ್ದಾರೆ

By

Published : Oct 27, 2020, 12:21 PM IST

Updated : Oct 27, 2020, 12:27 PM IST

ಸ್ಯಾಂಡಲ್​​ವುಡ್​ನಲ್ಲಿ ದೊಡ್ಡ ಸಿನಿಮಾಗಳು ರಿಲೀಸ್​ ಆಗಬೇಕು. ದರ್ಶನ್​​ ಅಭಿನಯದ ರಾಬರ್ಟ್​​ ಆದ್ರೂ ಪರವಾಗಿಲ್ಲ, ನನ್ನ ಸಿನಿಮಾ ರವಿ ಬೋಪಣ್ಣ ಆದ್ರೂ ಪರವಾಗಿಲ್ಲ. ದೊಡ್ಡ ಸಿನಿಮಾಗಳು ತೆರೆ ಕಂಡ್ರೆ ಸಿನಿಮಾ ನೋಡಲು ಥಿಯೇಟರ್​ ಕಡೆ ಜನ ಬಂದೇ ಬರ್ತಾರೆ ಎಂದು ಕ್ರೇಜಿಸ್ಟಾರ್​​ ರವಿಚಂದ್ರನ್​ ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 30 ವರ್ಷಗಳ ಹಿಂದೆ ನಾನು ಕನ್ನಡಿಗ ಎಂಬ ಸಿನಿಮಾ ಮಾಡಲು ಶೀರ್ಷಿಕೆಯನ್ನು ರಿಜಿಸ್ಟರ್​​ ಮಾಡಿಸಿದ್ದೆ. ಆದರೆ ಆ ಸಿನಿಮಾ ಮಾಡುವ ಕಾಲ ಈಗ ಕೂಡಿ ಬಂದಿದೆ. ಕನ್ನಡಿಗ ಟೈಟಲ್​​ ಅನ್ನು ನಿರ್ಮಾಪಕ ಎನ್.ಎಸ್. ರಾಜ್ ಕುಮಾರ್ ಕೇಳಿದ್ದರು. ಆದ್ರೆ ನಾನು ಆ ಟೈಟಲ್​ ಅನ್ನು ಕೊಡಲು ಸಾಧ್ಯವಿಲ್ಲ ಎಂದಿದ್ದೆ. ಬೇಸರ ಮಾಡಿಕೊಳ್ಳದ ರಾಜ್​​ ಕುಮಾರ್​​, ವೀರ ಕನ್ನಡಿಗ ಎಂಬ ಸಿನಿಮಾ ಮಾಡಿದ್ರು. ಇದೀಗ ಎನ್.ಎಸ್. ರಾಜ್ ಕುಮಾರ್ ನಿರ್ಮಾಣದಲ್ಲಿಯೇ ಕನ್ನಡಿಗ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಆ ಸಿನಿಮಾ ಈಗ ಸೆಟ್ಟೇರಿದೆ ಎಂದು ರವಿಮಾಮ ತಿಳಿಸಿದ್ರು.

ಕನ್ನಡಿಗ ಚಿತ್ರತಂಡ

ಇನ್ನನ್ನು ಕನ್ನಡಿಗ ಸಿನಿಮಾ ನಿನ್ನೆ ಸೆಟ್ಟೇರಿದ್ದು, ಚಿತ್ರಕ್ಕೆ ಶಿವರಾಜ್​ ಕುಮಾರ್​​ ಮತ್ತು ರಾಘವೇಂದ್ರರಾಜ್​ಕುಮಾರ್​​ ಚಾಲನೆ ನೀಡಿದ್ದಾರೆ.

ಶಿವರಾಜ್​ಕುಮಾರ್​​

ತಮ್ಮ ಈಶ್ವರಿ ಪ್ರೊಡಕ್ಷನ್​​ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಒನ್​ ಅಂಡ್​​ ಓನ್ಲಿ ಎಂಬ ಹೆಸರಿನ ಆ್ಯಪ್​ ಒಂದನ್ನು ಸಿದ್ಧಪಡಿಸಲಾಗುತ್ತದೆ. ಈ ಆ್ಯಪ್​ನಲ್ಲಿ ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಮಾಹಿತಿಗಳು ಸಿಗಲಿವೆ ಎಂದಿದ್ದಾರೆ. ಅಲ್ಲದ್ದೆ ಇದೇ ಹಿನ್ನೆಲೆಯಲ್ಲಿಯೇ ನಮ್ಮ ಪ್ರೊಡಕ್ಷನ್​​ನಿಂದ ಹೊಸ ಸಿನಿಮಾ ಘೋಷಣೆಯಾಗಲಿದೆ ಎಂದರು.

Last Updated : Oct 27, 2020, 12:27 PM IST

ABOUT THE AUTHOR

...view details