ಕಿಶೋರ್ ಹಾಗೂ ಬಿಗ್ಬಾಸ್ ಖ್ಯಾತಿಯ ಕೃಷಿ ತಾಪಂಡ ಅಭಿನಯದ 'V'(5) ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಇದೊಂದು ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಆಗಿದ್ದು ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.
'V'ಎರಡನೇ ಹಂತದ ಚಿತ್ರೀಕರಣ ಶೀಘ್ರದಲ್ಲೇ ಆರಂಭ - Ravi Vikram direction V movie
ರವಿ ವಿಕ್ರಮ್ ಕಥೆ ಬರೆದು ನಿರ್ದೇಸಿಸುತ್ತಿರುವ 'V'ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಚಿತ್ರದಲ್ಲಿ ಕಿಶೋರ್ ಪೊಲೀಸ್ ಅಧಿಕಾರಿಯಾಗಿ, ಕೃಷಿ ತಾಪಂಡ ಪತ್ರಕರ್ತೆಯಾಗಿ ನಟಿಸಿದ್ದಾರೆ.
!['V'ಎರಡನೇ ಹಂತದ ಚಿತ್ರೀಕರಣ ಶೀಘ್ರದಲ್ಲೇ ಆರಂಭ V 2nd schedule shoot start soon](https://etvbharatimages.akamaized.net/etvbharat/prod-images/768-512-8990373-321-8990373-1601433879618.jpg)
'V'ಚಿತ್ರದಂತ ಶೀರ್ಷಿಕೆ ಕನ್ನಡದಲ್ಲಿ ಹೊಸದೇನಲ್ಲ. 6-5=2 ಸಿನಿಮಾ, ಶೀರ್ಷಿಕೆಯಿಂದಲೇ ಹೆಚ್ಚು ಪ್ರೇಕ್ಷಕರನ್ನು ಸೆಳೆದಿತ್ತು. 'V'ಚಿತ್ರದಲ್ಲಿ ಕಿಶೋರ್, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರೆ ಕೃಷಿ ತಾಪಂಡ ಪತ್ರಕರ್ತೆಯಾಗಿ ನಟಿಸಿದ್ದಾರೆ. ತೆರೆ ಮೇಲೆ ಈ ಚಿತ್ರದ ಕಥೆ 2 ಕಾಲಘಟ್ಟದಲ್ಲಿ ಅನಾವರಣ ಆಗುತ್ತದೆ. 1980 ರಿಂದ 2020 ವರೆಗೆ ನಡೆಯುವ ಪ್ರಮುಖ ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ರವಿ ವಿಕ್ರಮ್ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಲಾಕ್ಡೌನ್ಗೂ ಮುನ್ನ ಮೈಸೂರು ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ನಡೆದಿತ್ತು. ಎರಡನೇ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.