ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇದೀಗ ನೆಟ್ಟಗರಿಗೆ ಆಹಾರವಾಗಿದ್ದಾರೆ. ಹಾರ್ದಿಕ್ ಪಾಂಡ್ಯಾರ ಮಾಜಿ ಪ್ರೇಯಸಿ ಎನ್ನಲಾಗ್ತಿರುವ ರೌಟೇಲಾ ಅವರು ಪ್ರಧಾನಿ ಮೋದಿ ಅವರ ಟ್ವೀಟ್ವೊಂದನ್ನು ನಕಲಿ ಮಾಡುವ ಮೂಲಕ ಟ್ರೋಲ್ಗೆ ಒಳಗಾಗುತ್ತಿದ್ದಾರೆ.
ಶನಿವಾರ ಸಂಜೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಿವುಡ್ನ ಹಿರಿಯ ನಟಿಗೆ ನರೇಂದ್ರ ಮೋದಿ ಗುಣಮುಖರಾಗುವಂತೆ ಟ್ವೀಟ್ವೊಂದನ್ನು ಮಾಡಿದ್ದರು. ಆ ಟ್ವೀಟ್ನಲ್ಲಿ ಶಬಾನಾ ಅಜ್ಮಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟ್ನ್ನೇ ನಟಿ ರೌಟೇಲಾ ನಕಲಿಸಿದ್ದಾರೆ.
ಅಪಘಾತದಲ್ಲಿ ಅಜ್ಮಿಶಬಾನಾ ಜಿ ಗಾಯಗೊಂಡ ಸುದ್ದಿ ದುಃಖಕರವಾಗಿದೆ. ಅವರ ಶೀಘ್ರ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ನಲ್ಲಿ ಪ್ರಧಾನಿ ಬರೆದುಕೊಂಡಿದ್ದರು. ಇದೀಗ ಈ ಟ್ವೀಟ್ನ್ನು ನಕಲು ಮಾಡಿರುವ ರೌಟೇಲಾ ಒಂದೂ ಪದವನ್ನು ಬದಲಿಸದೇ ತಮ್ಮ ಖಾತೆಯಿಂದ ಇದೇ ಟ್ವೀಟ್ನ್ನು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ಗೆ ಊರ್ವಶಿ ರೌಟೇಲಾರನ್ನು ಟ್ರೋಲಿಗರು ಸಖತ್ತಾಗಿಯೇ ಕಾಲೆಳೆಯುತ್ತಿದ್ದು, ನೀವ್ಯಾಕೆ ಮೋದಿ ಟ್ವೀಟ್ ಕಾಪಿ ಮಾಡಿದ್ರಿ, ಅದನ್ನ ರೀಟ್ವೀಟ್ ಮಾಡಬಹುದಿತ್ತು ಎಂದು ಒಬ್ರು ಕಾಲೆಳೆದ್ರೆ, ಮೋದಿಯವರ ಟ್ವೀಟ್ ಕಾಪಿ ಮಾಡಿದ್ರೆ ಅಫೆನ್ಸ್ ಅಲ್ಲ ಅಂತಾ ಮತ್ತೊಬ್ಬರು ಕಿಚಾಯಿಸಿದ್ದಾರೆ. ಇನ್ನೊಬ್ಬರು ಮೋದಿಯವರ ಟ್ವೀಟ್ನ್ನು ಚೆನ್ನಾಗಿಯೇ ಕಾಪಿ ಮಾಡಿದ್ದೀರಿ ಎಂದು ಕುಹಕವಾಡಿದ್ದಾರೆ.