ಮುಂಬೈ: ನಟಿ, ರಾಜಕಾರಿಣಿ ಉರ್ಮಿಳಾ ಮಾತೋಂಡ್ಕರ್ ಅವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ.
ಉರ್ಮಿಳಾ ಮಾತೋಂಡ್ಕರ್ ಇನ್ಸ್ಟಾಗ್ರಾಮ್ ಹ್ಯಾಕ್: ಎಫ್ಐಆರ್ ದಾಖಲು - actor files FIR with Maha Cyber
ನಟಿ, ರಾಜಕಾರಿಣಿ ಉರ್ಮಿಳಾ ಮಾತೋಂಡ್ಕರ್ ಅವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ಈ ಸಂಬಂದ ಅವರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉರ್ಮಿಳಾ ಮಾತೋಂಡ್ಕರ್ ಇನ್ಸ್ಟಾ ಹ್ಯಾಕ್
ಈ ಸಂಬಂಧ ಅವರು ಮಹಾರಾಷ್ಟ್ರ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನನ್ನ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ಮಹಿಳೆಯರಿಗೆ ಸಲಹೆ ನೀಡಿರುವ ಅವರು, ಯಾವುದೇ ಕಾರಣಕ್ಕೂ ಸೈಬರ್ ಕ್ರೈಂ ಅನ್ನು ಸುಲಭವಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.