ಕರ್ನಾಟಕ

karnataka

ETV Bharat / sitara

ಪ್ರೇಕ್ಷಕರ ಮಿದುಳಿಗೆ ಮತ್ತೆ ಕೆಲಸ ಕೊಟ್ಟ ಉಪ್ಪಿ ! - undefined

ಈ ಹೊಸ ಚಿತ್ರದಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಅವರು ಒಂದು ಪಾತ್ರದಲ್ಲಿ ತತ್ವಜ್ಞಾನಿಯಾಗಿ ಕಾಣಿಸಲಿದ್ದು, ಮತ್ತೊಂದು ಪಾತ್ರವನ್ನು ಇನ್ನೂ ರಿವೀಲ್ ಮಾಡಿಲ್ಲ.

ಉಪ್ಪಿ

By

Published : May 20, 2019, 3:22 PM IST

ಲೋಕಸಭೆ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಸ್ಯಾಂಡಲ್​​ವುಡ್ ನಟ ಉಪೇಂದ್ರ ಇದೀಗ ಮತ್ತೆ ಚಿತ್ರರಂಗದತ್ತ ಹೊರಳಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಐ ಲವ್ ಯೂ' ಚಿತ್ರ ಜೂನ್​ 14ಕ್ಕೆ ರಿಲೀಸ್ ಆಗ್ತಿದೆ. ಇದೀಗ ಮತ್ತೊಂದು ಚಿತ್ರಕ್ಕೆ ಉಪ್ಪಿ ರೆಡಿಯಾಗ್ತಿದ್ದಾರೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್​​ಡಿ ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಈ ಹೊಸ ಚಿತ್ರದಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಅವರು ಒಂದು ಪಾತ್ರದಲ್ಲಿ ತತ್ವಜ್ಞಾನಿಯಾಗಿ ಕಾಣಿಸಲಿದ್ದು, ಮತ್ತೊಂದು ಪಾತ್ರವನ್ನು ಇನ್ನೂ ರಿವೀಲ್ ಮಾಡಿಲ್ಲ. ಹೊಸಬ ಡಿ.ಎನ್.ಮೌರ್ಯ ನಿರ್ದೇಶನದ ಈ ಚಿತ್ರ ಇದೇ 24ರಂದು ಸೆಟ್ಟೇರಲಿದೆ.

ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಜತೆ ನಟ ಉಪೇಂದ್ರ

ಈ ಸಿನಿಮಾಗೆ ಇನ್ನೂ ಹೆಸರಡಿದ ಚಿತ್ರತಂಡ ಪ್ರೇಕ್ಷಕರ ಮಿದುಳಿಗೆ ಕೆಲಸ ಕೊಟ್ಟಿದೆ. ಉಪೇಂದ್ರ ಅವರ ಮುಖ ಒಳಗೊಂಡ ಪ್ರಶ್ನಾರ್ಥಕ ಚಿಹ್ನೆ ರೀತಿಯಲ್ಲಿರುವ ಫಸ್ಟ್ ಲುಕ್​ ರಿಲೀಸ್​ ಮಾಡಿದ್ದು, ಈ ಚಿತ್ರದ ಟೈಟಲ್​ ಏನಾಗಬಹುದು ಎಂದು ಊಹಿಸಿ ಎಂದು ಹೇಳಿದೆ.

ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಜತೆ ನಟ ಆದಿತ್ಯಾ

ಈ ಚಿತ್ರಕ್ಕೆ ಮೊದಲು 'ಪಿತಾಮಹ' ಎಂದು ಹೆಸರಿಡಲು ಚಿತ್ರತಂಡ ಡಿಸೈಡ್ ಮಾಡಿತ್ತು. ಅದ್ರೆ ಈಗ ಚಿತ್ರತಂಡ 'ಬುದ್ಧಿವಂತ 2' ಶೀರ್ಷಿಕೆ ಫೈನಲ್ ಮಾಡುವ ಸಾಧ್ಯತೆಗಳಿವೆಯಂತೆ. ಈ ಚಿತ್ರದಲ್ಲಿ ಖಳನಾಯಕನಾಗಿ ಡೆಡ್ಲಿ ಸೋಮ‌ ನಟಿಸುತ್ತಿರುವುದು ಮತ್ತೊಂದು ವಿಶೇಷ. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ‌ ನೀಡಲಿದ್ದಾರೆ.

For All Latest Updates

TAGGED:

ABOUT THE AUTHOR

...view details