ಕರ್ನಾಟಕ

karnataka

ETV Bharat / sitara

ನೆಚ್ಚಿನ ನಟನ ಮನವಿಗೆ ಅಭಿಮಾನಿಗಳಿಂದ ಭರ್ಜರಿ ಸ್ಪಂದನೆ...! ಕೈ ಮುಗಿದು ಧನ್ಯವಾದ ಹೇಳಿದ ಉಪ್ಪಿ - ಉಪೇಂದ್ರ ಹುಟ್ಟುಹಬ್ಬ

ಅಭಿಮಾನಿಗಳ ಪ್ರೀತಿಯ ಉಡುಗೊರೆಯಾಗಿ ಸಾವಿರಾರು ಗಿಡಗಳು ಉಪ್ಪಿ ಮನೆ‌ಸೇರಿದ್ದು, ಅಭಿಮಾನಿಗಳ ಪ್ರೀತಿಗೆ‌ ಉಪೇಂದ್ರ ಧನ್ಯವಾದಗಳನ್ನು ಹೇಳಿದ್ದಾರೆ.

ಉಪೇಂದ್ರ

By

Published : Sep 20, 2019, 2:07 AM IST

ಸೆಪ್ಟೆಂಬರ್‌ 18ರಂದು ಐವತ್ತನೇ ವಸಂತ ಪೂರೈಸಿದ ಸ್ಯಾಂಡಲ್​​ವುಡ್ ಸೂಪರ್​​ಸ್ಟಾರ್ ಅದ್ಧೂರಿ ಹುಟ್ಟುಹಬ್ಬ ಆಚರಣೆ ಮಾಡಿದ್ದರು. ಇದಕ್ಕೂ ದಿನಗಳ ಮುಂಚಿತಬವಾಗಿ ಶುಭಾಶಯ ತಿಳಿಸಲು ಬರುವ ಅಭಿಮಾನಿಗಳಲ್ಲಿ ಉಪೇಂದ್ರ ಮನವಿಯೊಂದನ್ನು ಮಾಡಿದ್ದರು.

ತಮ್ಮ ಹುಟ್ಟುಹಬ್ಬಕ್ಕೆ ಕೇಕ್ ಹಾಗೂ ಹಾರಗಳ ಬದಲು ಗಿಡಗಳನ್ನು ತಂದು ಕೊಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ತಮ್ಮ ನೆಚ್ಚಿನ ನಟನ ಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಉಪ್ಪಿ ಅಭಿಮಾನಿಗಳು ಗಿಡಗಳನ್ನು ತಂದಿದ್ದರು.


ರಾಜ್ಯದ ಮೂಲೆಮೂಲೆಗಳಿಂದ ಬಂದಿದ್ದ ಉಪ್ಪಿ ಅಭಿಮಾನಿಗಳು ಗಿಡಗಳನ್ನು ತಂದು ಇಷ್ಟದ ನಟನಿಗೆ ಉಡುಗೊರೆಯಾಗಿ ನೀಡಿದ್ದರು. ಅಭಿಮಾನಿಗಳ ಪ್ರೀತಿಯ ಉಡುಗೊರೆಯಾಗಿ ಸಾವಿರಾರು ಗಿಡಗಳು ಉಪ್ಪಿ ಮನೆ‌ಸೇರಿದ್ದು, ಅಭಿಮಾನಿಗಳ ಪ್ರೀತಿಗೆ‌ ಉಪೇಂದ್ರ ಧನ್ಯವಾದಗಳನ್ನು ಹೇಳಿದ್ದಾರೆ.

ಅಭಿಮಾನಿಗಳ ಜೊತೆ ಮಧ್ಯರಾತ್ರಿಯೇ ಕೇಕ್ ಕಟ್ ಮಾಡಿದ "ಬುದ್ದಿವಂತ"

ವಿವಿಧ ಜಾತಿಯ ಹೂ‌ ಹಾಗೂ ಇತರೆ ಗಿಡಗಳು ಸಿಕ್ಕಿರುವುದಕ್ಕೆ ಪುಲ್ ಖುಷ್ ಆಗಿರುವ ಉಪ್ಪಿ, ವಿಡಿಯೋ ಮೂಲಕ ಅವರ ಅಭಿಮಾನಿ ವರ್ಗಕ್ಕೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಇನ್ನು ಮುಂದೆ ನಾನು ಪ್ರತಿ ಹುಟ್ಟುಹಬ್ಬವನ್ನು ಇದೇ ರೀತಿ ಗಿಡಗಳ ನೆಡುವ ಮೂಲಕ ಆಚರಿಸುತ್ತೇನೆ, ನೀವೂ ಸಹ ಇದನ್ನೇ ಪಾಲಿಸಿ ಎಂದು ಅಭಿಮಾನಿಗಳಲ್ಲಿ ಹೇಳಿದ್ದಾರೆ.

ABOUT THE AUTHOR

...view details