ಕನ್ನಡದ ಬಗ್ಗೆ, ಕನ್ನಡಿಗರಿಗೆ ಕರ್ನಾಟಕದಲ್ಲಿ ಕೆಲಸದಲ್ಲಿ ಆದ್ಯತೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ವರ್ಷಗಳಿಂದ ಹೋರಾಟಗಳು ನಡೆಯುತ್ತಲೇ ಇದೆ. ಇದೀಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ.
ನಮ್ಮ ರಾಜ್ಯದಲ್ಲೇ ನಮಗೆ ಕೆಲಸ ಸಿಗದಿದ್ರೆ ನಾವೆಲ್ಲಿ ಹೋಗಬೇಕು ಎಂದು ಪ್ರಶ್ನಿಸಿದ ಉಪೇಂದ್ರ - Upendra reaction abut Job
ಬೇರೆ ರಾಜ್ಯಗಳಲ್ಲಿ ಸ್ಥಳೀಯರಿಗೆ ಹೇಗೆ ಕೆಲಸದಲ್ಲಿ ಮೀಸಲು ನೀಡಿದ್ದಾರೋ ನಮ್ಮ ರಾಜ್ಯದಲ್ಲಿ ಕೂಡಾ ಕನ್ನಡಿಗರಿಗೆ ಕೆಲಸದಲ್ಲಿ ಆದ್ಯತೆ ನೀಡಬೇಕು ಎಂದು ನಟ, ನಿರ್ದೇಶಕ ಉಪೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಕೆಲಸ ಮೀಸಲು ಎಂಬ ಕೂಗು ಕೇಳಿ ಬರುತ್ತಿದೆ. ಅದರಲ್ಲೂ ಆಂಧ್ರಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ಸ್ಥಳೀಯರಿಗೆ ಸರ್ಕಾರಿ ಕೆಲಸ ಮೀಸಲಾದ ನಂತರ ಕರ್ನಾಟದಲ್ಲಿ ಕೂಡಾ ಇದರ ಬಗ್ಗೆ ಮತ್ತಷ್ಟು ಚರ್ಚೆ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ನಟ, ನಿರ್ದೇಶಕ, ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಕೆಲಸ ಸಿಗದ ಮೇಲೆ ಮತ್ತೆ ನಾವೆಲ್ಲಿ ಹೋಗಬೇಕು..? ನಾನು ಈ ರಾಜ್ಯದಲ್ಲಿ ಹುಟ್ಟಿರುವುದರಿಂದ ನನಗೆ ಕೆಲಸದಲ್ಲಿ ಆದ್ಯತೆ ಕೊಡಿ ಎಂದು ಕೇಳುವುದರಲ್ಲಿ ತಪ್ಪೇನಿಲ್ಲ. ಇತರ ರಾಜ್ಯಗಳಲ್ಲಿ ಆಯಾ ರಾಜ್ಯದವರಿಗೆ ಹೇಗೆ ಕೆಲಸದಲ್ಲಿ ಮೀಸಲು ನೀಡಿದ್ದಾರೋ ನಮ್ಮ ರಾಜ್ಯದಲ್ಲಿ ಕೂಡಾ ಕನ್ನಡಿಗರಿಗೆ ಕೆಲಸದ ವಿಚಾರದಲ್ಲಿ ಆದ್ಯತೆ ನೀಡಬೇಕು ಎಂದು ಉಪೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.