ಕರ್ನಾಟಕ

karnataka

ETV Bharat / sitara

ಚಿತ್ರರಂಗದಲ್ಲಿ ಡ್ರಗ್ಸ್​ ದಂಧೆ ಇದೆಯೆಂದು ಕೇಳಿ ದಿಗ್ಭ್ರಮೆಯಾಗಿದೆ : ಉಪೇಂದ್ರ - ರಿಯಲ್​ ಸ್ಟಾರ್​ ಉಪೇಂದ್ರ ಸುದ್ದಿಗೋಷ್ಠಿ

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ದಂಧೆ ನಡೆಯುತ್ತಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದು, ಈ ಬಗ್ಗೆ ರಿಯಲ್​ ಸ್ಟಾರ್​ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

upendra-reaction-about-drugs-mafia-in-sandalwood
ಡ್ರಗ್ಸ್​ ದಂಧೆ ಬಗ್ಗೆ ರಿಯಲ್​ ಸ್ಟಾರ್​ ಉಪೇಂದ್ರ ಪ್ರತಿಕ್ರಿಯೆ

By

Published : Aug 30, 2020, 2:13 AM IST

Updated : Aug 30, 2020, 9:38 AM IST

ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್​ ದಂಧೆ ನಡೆಯುತ್ತಿದೆ ಎಂಬುದನ್ನು ಕೇಳಿ ತಮಗೆ ದಿಗ್ಭ್ರಮೆಯಾಗಿದೆ ಎಂದು ನಟ, ನಿರ್ದೇಶಕ ಉಪೇಂದ್ರ ಹೇಳಿದ್ದಾರೆ.

ತಮ್ಮ ಮುಂಬರುವ 'ಕಬ್ಜ' ಚಿತ್ರದ ಬಗ್ಗೆ ಎಲ್ಲಾ ಭಾಷೆಯರು ತಿಳಿದುಕೊಳ್ಳಲಿ ಅಂತಾ ನಡೆದ ವೆಬ್​ಸೈಟ್​ ಲೋಕಾರ್ಪಣೆ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬುದ್ಧಿವಂತ, ಡ್ರಗ್ಸ್ ಮಾಫಿಯಾ ಬಗ್ಗೆ ನನಗೆನೂ ಗೊತ್ತಿಲ್ಲ. ಪಾರ್ಟಿಗಳ ಸಂದರ್ಭದಲ್ಲಿ ಡ್ರಗ್ಸ್ ಹೇಗೆ ತೆಗೆದುಕೊಳ್ಳುತ್ತಾರೆ ಅನ್ನೋದು ನನಗೆ ಅರಿವಿಲ್ಲ. ನಾನು ಕೂಡ ಯಾವತ್ತೂ ನೋಡಿಲ್ಲ ಅಂತಾ ಹೇಳಿದ್ರು.

ಡ್ರಗ್ಸ್​ ದಂಧೆ ಬಗ್ಗೆ ರಿಯಲ್​ ಸ್ಟಾರ್​ ಉಪೇಂದ್ರ ಪ್ರತಿಕ್ರಿಯೆ

ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ ಇದ್ದಿರುವುದೇ ನಿಜವಾಗಿದ್ರೆ, ಅದರಲ್ಲಿ ಯಾರೆಲ್ಲ ಪಾಲ್ಗೊಂಡಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಹೊರಬರುತ್ತೆ. ಈ ಬಗ್ಗೆ ಏನೂ ಗೊತ್ತಿಲ್ಲದೆ ಮಾತನಾಡೋದು ಸರಿಯಲ್ಲ. ಸತ್ಯ ಹೊರಬಂದ ಮೇಲೆ ಎಲ್ಲರಿಗೂ ತಿಳಿಯುತ್ತೆ ಎಂದು ತಿಳಿಸಿದ್ರು.

ಇನ್ನು ನಶೆಯ ಗುಂಗು ಯಾವತ್ತೂ ಶಾಶ್ವತ ಅಲ್ಲ. ಯುವ ಜನಾಂಗ ದಯವಿಟ್ಟು ಡ್ರಗ್ಸ್​ನಿಂದ ದೂರ ಇರಿ ಅಂತಾ ಉಪೇಂದ್ರ ಕಿವಿಮಾತು ಹೇಳಿದ್ರು.

Last Updated : Aug 30, 2020, 9:38 AM IST

ABOUT THE AUTHOR

...view details