ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ದೇಶಕ ಆರ್.ಚಂದ್ರು ಕಾಂಬಿನೇಷನ್ನಲ್ಲಿ ಬಂದ ಐ ಲವ್ ಯೂ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆದು, ಯಶಸ್ವಿ ನೂರು ದಿನಗಳನ್ನ ಪೂರೈಯಿಸಿದೆ. ಚಿತ್ರದಲ್ಲಿ ದುಡಿದ ತಂತ್ರಜ್ಞರಿಗೆ ನೆನಪಿನ ಕಾಣಿಕೆ ಕೊಡುವ ಮೂಲಕ ಚಿತ್ರದ ಶತದಿನೋತ್ಸವನ್ನ ನಿರ್ದೇಶಕರು ಸಂಭ್ರಮಿಸಿದರು.
ಕಬ್ಜ ಸಿನಿಮಾ ಪೋಸ್ಟರ್ ರಿಲೀಸ್ ಕಾರ್ಯಕ್ರಮ ಇದೇ ಖುಷಿಯಲ್ಲಿರೋ ನಿರ್ದೇಶಕ ಆರ್.ಚಂದ್ರು ತಮ್ಮ ಹೊಸ ಸಿನಿಮಾವನ್ನ ಘೋಷಿಸಿದ್ದಾರೆ. ವಿಶೇಷ ಅಂದ್ರೆ, ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಿರ್ದೇಶಕ ಆರ್.ಚಂದ್ರು ಇನ್ನೊಂದು ಚಿತ್ರ ಮಾಡುತ್ತಿದ್ದು, ಏಳು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ "ಕಬ್ಜ" ಎಂದು ಟೈಟಲ್ ಇಡಲಾಗಿದೆ.
ಇದೊಂದು ರೌಡಿಸಂ ಚಿತ್ರವಾಗಿದ್ದು, ಉಪೇಂದ್ರ ಕೈಯಲ್ಲಿ ಲಾಂಗ್ ಹಿಡಿದಿದ್ದಾರೆ. ಕಬ್ಜ ಚಿತ್ರದ ಪೋಸ್ಟರ್ ರಿವೀಲ್ ಆಗಿದ್ದು, ಸಖತ್ ಡಿಫ್ರೆಂಟ್ ಆಗಿದೆ. ವಿಶೇಷ ಅಂದರೆ, ಡಾ.ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ಕಿಚ್ಚ ಸುದೀಪ್, ದರ್ಶನ್, ಯಶ್ ಅಭಿಮಾನಿಗಳ ಸಂಘದ ಅಧ್ಯಕ್ಷರು ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ರು.
ನಿರ್ದೇಶಕ ಆರ್.ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಮೂರನೇ ಬಾರಿಗೆ ಮತ್ತೆ ಒಂದಾಗುತ್ತಿದ್ದಾರೆ. ಸದ್ಯ ಟೈಟಲ್ ನಷ್ಟೇ ಅನೌಸ್ ಮಾಡಿರುವ ನಿರ್ದೇಶಕ ಚಂದ್ರು, ಕಬ್ಜ ಚಿತ್ರದ ಇನ್ನುಳಿದ ತಾರಾಗಣದಲ್ಲಿ ಯಾರ್ಯಾರು ಅನ್ನೋದನ್ನು ಬಿಟ್ಟುಕೊಟ್ಟಿಲ್ಲ.