ಕರ್ನಾಟಕ

karnataka

ಕೊರೊನಾದಿಂದ ಬಸವಳಿದ ರೈತರಿಗೆ ಆಶಾಕಿರಣವಾದ ಉಪೇಂದ್ರ: ಅನ್ನದಾತನ ಸಹಾಯಕ್ಕೆ ನಿಂತ ಬುದ್ಧಿವಂತ

By

Published : May 17, 2021, 8:44 PM IST

ರಿಯಲ್ ಸ್ಟಾರ್ ಉಪೇಂದ್ರ, ಚಿತ್ರರಂಗದ ಸ್ನೇಹಿತರು ಹಾಗೂ ಸಾಕಷ್ಟು ದಾನಿಗಳು ಸಹಯೋಗದಿಂದ, ಕನ್ನಡ ಚಿತ್ರರಂಗದ ಒಕ್ಕೂಟದ ಎಲ್ಲ ಸಂಘಗಳ ಕಾರ್ಮಿಕರಿಗೆ ಆಹಾರದ ಕಿಟ್ ಗಳನ್ನ ನೀಡುತ್ತಿದ್ದಾರೆ. ಹಾಗೆ ರೈತರಿಗೂ ಕೂಡ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ.

 Upendra help to farmers
Upendra help to farmers

ಕೊರೊನಾದಿಂದಾಗಿ ಕನ್ನಡ ಚಲನಚಿತ್ರ ರಂಗದಲ್ಲಿ ಸಾವಿರಾರು ಕಾರ್ಮಿಕರು ಹಾಗೂ ಪೋಷಕ ಕಲಾವಿದರು ಕೆಲಸವಿಲ್ಲದೇ ಕಷ್ಟಪಡುತ್ತಿದ್ದಾರೆ.ಇಂತಹ ಸಮಯದಲ್ಲಿ ಕನ್ನಡದ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯವನ್ನು ಮಾಡಲು ಮುಂದಾಗಿದ್ದಾರೆ.

ಈ ಸಾಲಿನಲ್ಲಿ ಕಳೆದ ಒಂದು ವಾರದಿಂದ ರಿಯಲ್ ಸ್ಟಾರ್ ಉಪೇಂದ್ರ, ಚಿತ್ರರಂಗದ ಸ್ನೇಹಿತರು ಹಾಗೂ ಸಾಕಷ್ಟು ದಾನಿಗಳು ಸಹಯೋಗದಿಂದ, ಕನ್ನಡ ಚಿತ್ರರಂಗದ ಒಕ್ಕೂಟದ ಎಲ್ಲಾ ಸಂಘಗಳ ಕಾರ್ಮಿಕರಿಗೆ ಆಹಾರದ ಕಿಟ್ ಗಳನ್ನ ನೀಡುತ್ತಿದ್ದಾರೆ.

ಇದೀಗ ದೇಣಿಗೆ ರೂಪದಲ್ಲಿ ಬಂದ ಹಣದಿಂದ ರೈತರ ಬೆಳೆದಿರುವ, ಟೊಮೇಟೊ, ಈರುಳ್ಳಿ, ಕುಂಬಳಕಾಯಿಯನ್ನ ನೇರವಾಗಿ ಖರೀದಿ ಮಾಡಿದ್ದಾರೆ. ಹಿರಿಯೂರಿನ ಮಹೇಶ್ ಎಂಬುವರು 3 ಸಾವಿರ ಕೆ.ಜಿ ಈರುಳ್ಳಿಯನ್ನು ಸಾರಿಗೆ ವೆಚ್ಚ ಸೇರಿ 37 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದಾರೆ‌.

ಇನ್ನು 3640 ಕೆ.ಜಿ ಸಿಹಿ ಕುಂಬಳಕಾಯಿಗೆ ಮಂಜುನಾಥ್ ಎಂಬ ರೈತನಿಂದ 23,000 ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಚಿಕ್ಕಬಳ್ಳಾಪುರದ ರೈತ ಶಿವಕುಮಾರ್ ತಾವು ಬೆಳೆದ ಟೊಮೇಟೊವನ್ನು ಸಾಗಣೆ ವೆಚ್ಚ 10 ಸಾವಿರ ರೂ. ಪಡೆದು ಸಂಕಷ್ಟದಲ್ಲಿರುವ ಜನರಿಗೆ ತಾವೇ ಹಂಚಿ ಉಪೇಂದ್ರರ ಜೊತೆ ಕೈ ಜೋಡಿಸಿದ್ದಾರೆ.

ABOUT THE AUTHOR

...view details