ಆಸ್ಟ್ರೇಲಿಯಾದಲ್ಲಿ ನಡೆದ ಮೆಲ್ಬರ್ನ್ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕುಣಿದು ಕುಪ್ಪಳಿಸಿದ್ದಾರೆ. ಮೆಲ್ಬರ್ನ್ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವಕ್ಕೆ ಉಪೇಂದ್ರ ದಂಪತಿ ಭಾಗಿಯಾಗಿದ್ರು. ಮೆಲ್ಬರ್ನ್ ನಗರದ ಸ್ಪ್ರಿಂಗ್ವೇಲ್ ಟೌನ್ ಹಾಲ್ನಲ್ಲಿ ಈ ಕಾರ್ಯಕಮವನ್ನು ಏರ್ಪಡಿಸಲಾಗಿತ್ತು.
ಮೆಲ್ಬರ್ನ್ ಕನ್ನಡ ರಾಜ್ಯೋತ್ಸವದಲ್ಲಿ ಉಪ್ಪಿ ಸಿಗ್ನೇಚರ್ ಸ್ಟೆಪ್: ವಿಡಿಯೋ ನೋಡಿ - upendra dance
ಆಸ್ಟ್ರೇಲಿಯಾದಲ್ಲಿ ಮೆಲ್ಬರ್ನ್ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವಕ್ಕೆ ಉಪೇಂದ್ರ ದಂಪತಿ ಭಾಗಿಯಾಗಿದ್ರು. ಮೆಲ್ಬರ್ನ್ ನಗರದ ಸ್ಪ್ರಿಂಗ್ವೇಲ್ ಟೌನ್ ಹಾಲ್ನಲ್ಲಿ ಈ ಕಾರ್ಯಕಮವನ್ನು ಏರ್ಪಡಿಸಲಾಗಿದ್ದು ಉಪೇಂದ್ರ ಸಖತ್ ಡ್ಯಾನ್ಸ್ ಮಾಡಿದ್ದಾರೆ.

ರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಆಸ್ಟ್ರೇಲಿಯಾ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ್ದು, ಅಭಿಮಾನಿಗಳ ಒತ್ತಾಯದ ಮೆರೆಗೆ 'ಉಪೇಂದ್ರ' ಚಿತ್ರದ 'ಎಂಟಿವಿ ಸುಬ್ಬಲಕ್ಷ್ಮಿಗೆ ಬರಿ ಓಳು' ಹಾಡಿಗೆ ಸ್ಟೇಜ್ ಮೇಲೆ ಕುಣಿದು ಸಂಭ್ರಮಿಸಿದ್ರು. ಅಲ್ಲದೆ ಉಪೇಂದ್ರ ಜೊತೆ ಅಭಿಮಾನಿಗಳು ಸಖತ್ತಾಗಿ ಡ್ಯಾನ್ಸ್ ಮಾಡಿದ್ರು.
ಇನ್ನೂ ಈ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ದೀಪಕ್ ದೊಡ್ಡೇರಾ ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮೆಲ್ಬರ್ನ್ ಕನ್ನಡ ಸಂಘದ ಅಧ್ಯಕ್ಷ ಗಂಗಾಧರ್ ಬಿ, ಉಪಾಧ್ಯಕ್ಷ ಶ್ರೀನಿವಾಸ್ ಶರ್ಮಾ, ಕಾರ್ಯದರ್ಶಿ ಚಂದ್ರ ಬೆಂಗಳೂರು ಹಾಗೂ ಆಸ್ಟ್ರೇಲಿಯಾ ಬೆಂಗಳೂರು ಪ್ರತಿನಿಧಿ ಸಾಯಿ ಅಶೋಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
TAGGED:
upendra dance