ಕರ್ನಾಟಕ

karnataka

ETV Bharat / sitara

ನಾನು ಸಿಎಂ ಆಗ್ಬೇಕು, ಚುನಾವಣೆಗೆ ಸ್ಪರ್ಧಿಸಿದ್ರೆ ಗೆಲ್ಲಿಸ್ತೀರಾ?: ಜನರಿಗೆ ನಟ ಉಪೇಂದ್ರ ಪ್ರಶ್ನೆ - Upendra

ಚಂದನವನದ ರಿಯಲ್ ಸ್ಟಾರ್ ಸಿಎಂ ಆಗ್ತಾರಾ? ನಟ ಉಪೇಂದ್ರ ಅವರ ಟ್ವಿಟರ್‌ ಪೋಸ್ಟ್ ಈ ಪ್ರಶ್ನೆ ಹುಟ್ಟು ಹಾಕಿದೆ.

Upendra about CM post in social media
ಬುದ್ಧಿವಂತ’ನ ಈ ಪೋಸ್ಟ್​ನ ಒಳ ಅರ್ಥವೇನು?

By

Published : May 23, 2021, 10:50 AM IST

"ನಾನು ಉಪೇಂದ್ರ, ಈ ರಾಜ್ಯದ ಮುಖ್ಯಮಂತ್ರಿ (CM) ಆಗ್ಬೇಕು, ನಾನು ಚುನಾವಣೇಲಿ ಸ್ಪರ್ಧಿಸಿದರೆ? ನೀವು ನನ್ನನ್ನು ಗೆಲ್ಲಿಸ್ತೀರಾ?"

ಇದು ರಿಯಲ್ ಸ್ಟಾರ್ ಉಪೇಂದ್ರ ಅವರ ಸೋಷಿಯಲ್​ ಮೀಡಿಯಾ ಪೋಸ್ಟ್​. ಉಪ್ಪಿ ಮಾಡಿರುವ ಈ ಒಂದು ಪೋಸ್ಟ್​ ಜನರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಯಾಗುತ್ತಿದೆ.

"ನೋಡಿ, ನಾನು ಸಮಾಜ ಸೇವೆ ಮಾಡ್ತಿದೀನಿ. ರೈತರಿಂದ ಬೆಳೆ ಕೊಂಡು ಉಚಿತವಾಗಿ ಕಷ್ಟದಲ್ಲಿರೋರಿಗೆ ಹಂಚ್ತಿದೀನಿ. ಚುನಾವಣೆ ಸಮಯದಲ್ಲಿ ಹೋರಾಟನೂ ಮಾಡ್ತೀನಿ. ಆಡಳಿತ ಪಕ್ಷ, ವಿರೋಧ ಪಕ್ಷದ ಜನರಿಗೆ ಏನೂ ಮಾಡದೆ ಸಂಪೂರ್ಣ ವಿಫಲ ಆಗಿದೆ ಅಂತ ಮಾಧ್ಯಮದಲ್ಲಿ ಕೂಗಿ ಹೇಳ್ತೀನಿ. ಇವರನ್ನೆಲ್ಲಾ ಕಿತ್ಹಾಕಿ ನನಗೆ ಒಂದು ಅವಕಾಶ ಕೊಡಿ. ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ನಾನು ಕೆಲಸ ಮಾಡ್ತೀನಿ. ಹಗಲು-ರಾತ್ರಿ ಕಷ್ಟಪಟ್ಟು ಸುವರ್ಣ ಕರ್ನಾಟಕ ಮಾಡ್ತೀನಿ" ಎಂದು ಉಪ್ಪಿ ಭರವಸೆ ನೀಡಿದ್ದಾರೆ.

ಹಾಗಾದರೆ ಉಪೇಂದ್ರ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆಗೆ ಅವರೇ ಮುಂದುವರೆದು, "ನಾನು ಎಲೆಕ್ಷನ್​ಗೆ ನಿಲ್ಲಲ್ಲ. ಹಾಗಾದ್ರೆ ಉತ್ತಮ ಪ್ರಜಾಕೀಯ ಪಕ್ಷ ಯಾಕೆ ಅಂತ ಕೇಳ್ತೀರಾ?, ಪ್ರಜಾಕೀಯದಲ್ಲಿ ನಿಮಗೆ ಗೊತ್ತಿಲ್ಲದಿರೋ ಸಾಮಾನ್ಯರು ಚುನಾವಣೆಗೆ ನಿಲ್ತಾರೆ. ಬರೀ ಪ್ರಜಾಕೀಯ ವಿಚಾರ ತಿಳ್ಕೊಂಡು ವೋಟ್ ಹಾಕಿ ಅವರಿಗೆ ಕೆಲಸ ಕೊಟ್ರೆ ನಿಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನಿಮಗೆ ಬೇಕಾದ ಕೆಲಸ, ಪೈಸೆ ಪೈಸೆ ಲೆಕ್ಕ ಕೊಟ್ಟು ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ತಾರೆ. ಪ್ರಜಾಕೀಯದ ಕಾರ್ಯವೈಖರಿ ತರ ಕೆಲಸ ಮಾಡ್ಲಿಲ್ಲ ಅಥವಾ ನಿಮಗೆ ಅವನ/ಅವಳ ಕೆಲಸ ಇಷ್ಟ ಆಗ್ಲಿಲ್ಲ ಅಥವಾ ಹಣ, ಅಧಿಕಾರದ ಆಸೆಗೆ ಬೇರೆ ಪಕ್ಷದ ಜೊತೆ ಜಂಪ್ ಆಗೋಕೆ ಹೋದ್ರೆ ನಾನು ಉಪೇಂದ್ರ CM ಆಗಿ ನಿಮ್ ಜೊತೆ ನಿಲ್ತೀನಿ. ಈ ವ್ಯವಸ್ಥೆ ಸರಿ ಹೋಗೋಕೆ ಎರಡು ಎಲೆಕ್ಷನ್ ಜಾಸ್ತಿ ಆಗ್ಲಿ. ಅದಕ್ಕೆ ನಿಮ್ ಜೊತೆ ನಾನು ಯಾವಾಗ್ಲೂ ಇರೋ Permanent CM (ಕಾಮನ್ ಮೆನ್) ಜನ ಸಾಮಾನ್ಯ? ಇಲ್ಲ ಇಲ್ಲ, ಜನ ಅಸಾಮಾನ್ಯರಲ್ಲಿ ಒಬ್ಬನಾಗಿರ್ತೀನಿ. ಸರೀನಾ?" ಎಂದಿದ್ದಾರೆ.

ABOUT THE AUTHOR

...view details