ಕರ್ನಾಟಕ

karnataka

ETV Bharat / sitara

ಕೆಜಿಎಫ್ 2 ಹೊಸ ಅಪ್​ಡೇಟ್​​​​​ ರಿವೀಲ್...ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಚಿತ್ರತಂಡ - ಅಧೀರ

ಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ 'ಕೆಜಿಎಫ್ ಚಾಪ್ಟರ್ 2' ಚಿತ್ರತಂಡದಿಂದ ಬಿಗ್ ನ್ಯೂಸ್ ಹೊರಬಿದ್ದಿದೆ. ಈ ಚಿತ್ರದಲ್ಲಿ ನಟಿಸಲಿರುವ ಅಧೀರ ಪಾತ್ರಧಾರಿಯ ಫಸ್ಟ್​ ಲುಕ್ ರಿಲೀಸ್ ಆಗಿದೆ.

ಕೆಜಿಎಫ್

By

Published : Jul 26, 2019, 11:36 AM IST

ಇಡೀ ದೇಶವೇ ಎದುರು ನೋಡುತ್ತಿರುವ ಕೆಜಿಎಫ್2 ನಲ್ಲಿ ಅಧೀರ ಪಾತ್ರದಲ್ಲಿ ಯಾರು ಮಿಂಚಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಇದೀಗ ಈ ವಿಚಾರ ರಿವೀಲ್ ಆಗುವ ಸಮಯ ಕೂಡಿ ಬಂದಿದ್ದು, ಇದೇ 29, ಮುಂಜಾನೆ 10 ಗಂಟೆಗೆ ಅಧೀರ ಪಾತ್ರದಾರಿಯ ಹೆಸರು ಹೊರಬೀಳಲಿದೆ.

ಅಧೀರ ಕ್ಯಾರಕ್ಟರ್​ ಫಸ್ಟ್​ ಲುಕ್

ನಿನ್ನೆಯಷ್ಟೆ ಟ್ವೀಟ್ ಮಾಡಿದ್ದ ಚಿತ್ರತಂಡ, ಶುಕ್ರವಾರ ಮುಂಜಾನೆ 11 ಗಂಟೆಗೆ ಹೊಸ ಅಪ್​ಡೇಟ್ ಕೊಡುವುದಾಗಿ ಹೇಳಿತ್ತು. ಅದರಂತೆ ಇಂದು ಅಧೀರ ಕ್ಯಾರಕ್ಟರ್​ನ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಇದರಲ್ಲಿ ಬಲಾಡ್ಯ ವ್ಯಕ್ತಿಯೊಬ್ಬ ಹಿಂದೆ ಕೈ ಕಟ್ಟಿ ನಿಂತಿದ್ದಾರೆ. ಅವರ ಬಲಗೈನ ಬೆರಳಿನಲ್ಲಿ ಸಿಂಹ ಮುಖದ ಉಂಗುರ ಹೊಳೆಯುತ್ತಿದೆ. ಇವರು ಯಾರು ಎಂಬ ಕುತೂಹಲ ಕಾಯ್ದುಕೊಂಡಿರುವ ಚಿತ್ರತಂಡ, ಈ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದನ್ನು ಸೋಮವಾರ ಬಹಿರಂಗಗೊಳಿಸುವುದಾಗಿ ಹೇಳಿದೆ.

ಅಧೀರನಾಗಿ ಬಾಲಿವುಡ್ ನಟ ?

ಕೆಜಿಎಫ್ 2ನ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸಲಿದ್ದಾರೆ ಎನ್ನವ ಸುದ್ದಿ ಪ್ರಾರಂಭದಿಂದಲೂ ಕೇಳಿ ಬರುತ್ತಿದೆ. ಆದರೆ, ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಇದುವರೆಗೆ ಹೊರ ಬಿದ್ದಿಲ್ಲ. ಈಗ ರಿಲೀಸ್ ಆಗಿರುವ ಅಧೀರ ಪಾತ್ರಧಾರಿಯ ಲುಕ್ ನೋಡಿದ ಸಿನಿ ರಸಿಕರು ಇದು ಬಾಲಿವುಡ್ ನಟ ಸಂಜಯ್ ದತ್ ಎನ್ನುತ್ತಿದ್ದಾರೆ.

ನಟ ಸಂಜಯ್ ದತ್

ಇನ್ನು ಜುಲೈ 29 ರಂದು ನಟ ಸಂಜಯ್ ದತ್ ಅವರ ಬರ್ತ್​​ ಡೇ, ಅಂದೇ ಅಧೀರ ಯಾರು ಎಂಬುದನ್ನು ಕೆಜಿಎಫ್​ 2 ಚಿತ್ರತಂಡ ರಿವೀಲ್ ಮಾಡುತ್ತಿದೆ. ಅಂದ್ಮೇಲೆ ಈ ಕ್ಯಾರಕ್ಟರ್ ಪ್ಲೇ ಮಾಡ್ತಿರುವುದು ಸಂಜಯ್ ದತ್​ ಎಂಬುದನ್ನು ಚಿತ್ರತಂಡ ಸುಳಿವು ನೀಡಿದೆ.

ABOUT THE AUTHOR

...view details