ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸುತ್ತಿರುವ ಸಿನಿಮಾ 'ತ್ರಿಶೂಲಂ'. ನಿರ್ದೇಶಕ ಓಂಪ್ರಕಾಶ್ ನಿರ್ದೇಶನ ಮಾಡ್ತಾ ಇರೋ ತ್ರಿಶೂಲಂ ಸಿನಿಮಾದ ಚಿತ್ರೀಕರಣಕ್ಕೆ ಅಡ್ಡಿಯಾಗಿದೆ ಅಂತಾ ಸಿನಿಮಾದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಆರೋಪ ಮಾಡಿದ್ದಾರೆ.
ಹೈದರಾಬಾದ್‌ನಲ್ಲಿ ಸದ್ಯ 'ತ್ರಿಶೂಲಂ' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ರವಿಚಂದ್ರನ್ ಹಾಗೂ ಉಪೇಂದ್ರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಆದರೆ, ತೆಲಂಗಾಣ ಸಿನಿ ಕಾರ್ಮಿಕ ಒಕ್ಕೂಟದಿಂದ ನಮಗೆ ತೊಂದರೆಯಾಗಿದೆ ಅಂತಾ ನಿರ್ಮಾಪಕ ಕನಕಪುರ ಶ್ರೀನಿವಾಸ್ ಆರೋಪಿಸಿದ್ದಾರೆ.
ಸಿನಿಮಾ ಚಿತ್ರೀಕರಣಕ್ಕೆ ಯೂನಿಟ್ ಕಳಿಸಲು ಹಣ ಕಟ್ಟಬೇಕು. ನಾನು ಈಗಾಗಲೇ ಆ ಹಣವನ್ನ ಕೊಟ್ಟಿದ್ದೇನೆ, ಬಾಕಿ ಹಣ ಸಹ ನೀಡುವುದಾಗಿ ಹೇಳುತ್ತಿದ್ದರೂ ಸಿನಿಮಾ ಯೂನಿಟ್ ಅನ್ನ ಕಳಿಸಿಲ್ಲ,ಇದರಿಂದ ನಮ್ಮ ಸಿನಿಮಾಗೆ ತೊಂದರೆ ಆಗಿದೆ. ನನಗೆ ಒಂದು ದಿನದ ಚಿತ್ರೀಕರಣ ನಿಂತು 20 ರಿಂದ 25 ಲಕ್ಷ ರೂಪಾಯಿ ನಷ್ಟವಾಗಿದೆ ಅಂತಾ ಶ್ರೀನಿವಾಸ್ ಆರೋಪಿಸಿದ್ದಾರೆ.
ನಿರ್ಮಾಪಕ ಕನಕಪುರ ಶ್ರೀನಿವಾಸ್ ಆರೋಪ ನಿನ್ನೆಯಿಂದ ಹೈದರಾಬಾದ್‌ನಲ್ಲಿ 'ತ್ರಿಶೂಲಂ' ಚಿತ್ರತಂಡ ಚಿತ್ರೀಕರಣದಲ್ಲಿ ತೊಡಗಿದೆ. ಆದರೆ, ಇಂದು ಯುನಿಟ್ನವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಅಂತಾ ಶ್ರೀನಿವಾಸ್ ಆರೋಪ ಮಾಡಿದ್ದಾರೆ. ನಾನು ಈಗಾಗ್ಲೇ 1 ಲಕ್ಷ ಮುಂಗಡ ನೀಡಿದ್ದೇನೆ. ಉಳಿದ ಹಣ ನೀಡಲು ರಶೀತಿ ಬೇಕು ಎಂದಿದ್ದಾರೆ. ಈ ಗೊಂದಲದಲ್ಲಿ ಯುನಿಟ್ ಇಂದು ಚಿತ್ರೀಕರಣದಕ್ಕೆ ಆಗಮಿಸಿಲ್ಲ.
ಒಂದು ದಿನದ ಚಿತ್ರೀಕರಣ ನಿಂತರೆ ಸುಮಾರು 25 ಲಕ್ಷ ಲಾಸ್ ಆಗುತ್ತದೆ ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ. ಈ ಸಮಸ್ಯೆಗೆ ಹೈದರಾಬಾದ್ ಫಿಲ್ಮ್ ಫೆಡರೇಶನ್ ಕಾರಣ ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಆರೋಪಿಸಿದ್ದಾರೆ.
ಹೈದರಾಬಾದ್ನ ಸಂಗಿ ದೇವಸ್ಥಾನದ ಆವರಣದಲ್ಲಿ ಚಿತ್ರೀಕರಣ ಇನ್ನು ತ್ರಿಶೂಲಂ ಚಿತ್ರದಲ್ಲಿ ರವಿಚಂದ್ರನ್ ಹಾಗೂ ಉಪೇಂದ್ರ ಅಲ್ಲದೇ ಸಾನ್ವಿ ಶ್ರೀವಾಸ್ತವ್, ಸಾಧು ಕೋಕಿಲ, ನಿಮಿಕಾ ರತ್ನಾಕರ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಸೇರಿ ಸಾಕಷ್ಟು ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಹೈದರಾಬಾದಿನಲ್ಲಿ ಆಗಿರುವ ಸಮಸ್ಯೆ ಬಗ್ಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೈದರಾಬಾದ್ ಫಿಲ್ಮ್ ಫೆಡರೇಶನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.