ನವದೆಹಲಿ: ದುಬೈನಲ್ಲಿ ನಡೆದ ಇಂಡಿಯಾ ಎಕ್ಸ್‌ಪೋದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಭಾರತ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಆಜಾದಿ ಕಾ ಅಮೃತಮಹೋತ್ಸವದ ನಿಮಿತ್ತ ಇಂಡಿಯಾ ಪೆವಿಲಿಯನ್‌ನಲ್ಲಿ 'ದಿ ಗ್ಲೋಬಲ್ ರೀಚ್ ಆಫ್ ಇಂಡಿಯನ್ ಮೀಡಿಯಾ & ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿ' ಕುರಿತು ನಟರೊಂದಿಗೆ ಸಂವಾದ ನಡೆಸಲು ಠಾಕೂರ್ ಎಕ್ಸ್‌ಪೋಗೆ ಆಗಮಿಸಿದ್ದರು.
ವೇದಿಕೆ ಮೇಲಿದ್ದ ಕೆಂಪು ಖುರ್ತಾ ಧರಿಸಿದ್ದ ರಣವೀರ್ ಸಿಂಗ್ ಮೊದಲು ಒಂದು ಸ್ಟೆಪ್ ಹಾಕಿ ಸಚಿವರನ್ನು ಹುರಿ ದುಂಬಿಸಿದರು. ನಂತರ ಠಾಕೂರ್ ಕೂಡ ಬ್ಲಾಕ್‌ಬಸ್ಟರ್ ಸಿನಿಮಾ ಬಾಜಿರಾವ್ ಮಸ್ತಾನಿಯ ಹಿಟ್ ಹಾಡು ಮಲ್ಹಾರಿಗೆ ನೃತ್ಯ ಮಾಡಿದರು. ಸ್ಥಳದಲ್ಲಿ ನೆರದಿದ್ದ ಪ್ರೇಕ್ಷಕರು ಓಹೋ... ಎಂದು ಕೂಗಿದರು.