ಕರ್ನಾಟಕ

karnataka

ದಕ್ಷಿಣ ಭಾರತದ ಖ್ಯಾತ ನಟನ ಫಾರ್ಮ್​ಹೌಸ್​ನಲ್ಲಿ ಅಪರಿಚಿತ ಶವ ಪತ್ತೆ..!

ನಟ ನಾಗಾರ್ಜುನ ವರ್ಷದ ಹಿಂದೆ ಶಾದ್​ನಗರದಲ್ಲಿನ ಪಾಪಿರೆಡ್ಡಿ ಗೂಡದಲ್ಲಿ ನಲ್ವತ್ತು ಎಕರೆ ಪ್ರದೇಶದ ಕೃಷಿಭೂಮಿಯನ್ನು ಖರೀದಿ ಮಾಡಿದ್ದರು.

By

Published : Sep 20, 2019, 4:59 AM IST

Published : Sep 20, 2019, 4:59 AM IST

ಅಪರಿಚಿತ ಶವ

ಹೈದರಾಬಾದ್:ಖ್ಯಾತ ತೆಲುಗು ನಟ ನಾಗಾರ್ಜುನ ಅವರಿಗೆ ಸೇರಿದ್ದ ಫಾರ್ಮ್​ಹೌಸ್​ನಲ್ಲಿ ಅಪರಿಚಿತ ಶವವೊಂದು ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.

ಫಾರ್ಮ್​​ಹೌಸ್ ಬಳಿ ಇರುವ ಖಾಲಿ ಜಾಗ ಯಾವ ಬೆಳೆಗೆ ಸೂಕ್ತ ಎನ್ನುವ ವಿಚಾರ ತಿಳಿಯಲು ಒಂದಷ್ಟು ಮಂದಿಯನ್ನು ಹೈದರಾಬಾದ್ ಹೊರವಲಯದ ಶಾದ್​ನಗರದ ಪಾಪಿರೆಡ್ಡಿ ಗೂಡದಲ್ಲಿರುವ ಫಾರ್ಮ್​ಹೌಸ್​ಗೆ ನಟ ನಾಗಾರ್ಜುನ ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಖ್ಯಾತ ತೆಲುಗು ನಟ ನಾಗಾರ್ಜುನ

ಫಾರ್ಮ್​ಹೌಸ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ. ಫಾರ್ಮ್​ಹೌಸ್​ನ ಕೋಣೆಯೊಂದರಲ್ಲಿ ಶವ ಕಂಡುಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಈ ಸಂಬಂಧ ಕೇಶಮ್​ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಟ ನಾಗಾರ್ಜುನ ವರ್ಷದ ಹಿಂದೆ ಶಾದ್​ನಗರದಲ್ಲಿನ ಪಾಪಿರೆಡ್ಡಿ ಗೂಡದಲ್ಲಿ ನಲ್ವತ್ತು ಎಕರೆ ಪ್ರದೇಶದ ಕೃಷಿಭೂಮಿಯನ್ನು ಖರೀದಿ ಮಾಡಿದ್ದರು.

ABOUT THE AUTHOR

...view details