'ಆರತಿಗೊಬ್ಬ ಕೀರ್ತಿಗೊಬ್ಬ'ನ ಅಮ್ಮನಾಗಿ ಬರ್ತಿದ್ದಾರೆ ಉಮಾಶ್ರೀ - 'ಆರತಿಗೊಬ್ಬ ಕೀರ್ತಿಗೊಬ್ಬ'ನ ಅಮ್ಮನಾಗಿ ಬರ್ತಿದ್ದಾರೆ ಉಮಾ
ಕನ್ನಡದ ರಂಗಭೂಮಿ ಕಲಾವಿದೆ, ಚಲನಚಿತ್ರರಂಗದ ಪ್ರತಿಭಾನ್ವಿತ ನಟಿ ಉಮಾಶ್ರೀ ಇದೀಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬೆಳ್ಳಿತೆರೆಯ ಕಲಾವಿದರುಗಳು ಇದೀಗ ಕಿರಿತೆರೆಯಲ್ಲಿ ನಟಿಸುತ್ತಿರುವುದು ಮಾಮೂಲಿಯಾಗಿ ಬಿಟ್ಟಿದೆ. ಇದೀಗ ರಾಷ್ಟ್ರ ಪ್ರಶಸ್ತಿ ವಿಜೇತೆ ಉಮಾಶ್ರೀ ಅವರ ಸರದಿ. ಕನ್ನಡದ ರಂಗಭೂಮಿ ಕಲಾವಿದೆ, ಚಲನಚಿತ್ರರಂಗದ ಪ್ರತಿಭಾನ್ವಿತ ನಟಿ ಉಮಾಶ್ರೀ ಇದೀಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಆರತಿಗೊಬ್ಬ ಕೀರ್ತಿಗೊಬ್ಬ'ದಲ್ಲಿ ಉಮಾಶ್ರೀ ಅಮ್ಮನ ಪಾತ್ರದಲ್ಲಿ ನಟಿಸಲಿದ್ದಾರೆ. ಕುಟುಂಬವೊಂದರ ಕಥಾ ಹಂದರವಿರುವ ಈ ಧಾರಾವಾಹಿಯಲ್ಲಿ ಉಮಾಶ್ರೀ ತಮ್ಮ ಎಂದಿನ ಶೈಲಿಯಲ್ಲಿ ನಟಿಸಿದ್ದಾರೆ. ಉಮಾಶ್ರೀ ಚಲನಚಿತ್ರರಂಗದಲ್ಲಿಯೇ ಸಾಕಷ್ಟು ಹೆಸರು ಗಳಿಸಿದ್ದಾರೆ. ಸುಮಾರು 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು ಹೆಚ್ಚಾಗಿ ಕಾಣಿಸಿಕೊಂಡದ್ದು ಹಾಸ್ಯ ಪಾತ್ರಗಳಲ್ಲೇ.