ನಟ ಪುನೀತ್ ರಾಜ್ ಕುಮಾರ್ ಹಾಗೂ ಅವರ ಅಣ್ಣ ನಟ ರಾಘವೇಂದ್ರ ರಾಜ್ ಕುಮಾರ್ ಹೆಸರಿನಲ್ಲಿದ್ದ ಆಸ್ತಿಯನ್ನು ಎರಡು ವರ್ಷದ ಹಿಂದೆ ನಿರ್ಮಾಪಕ ಉಮಾಪತಿ ಖರೀದಿಸಿದ್ದರು. ಬಿಗ್ರೇಡ್ ರೋಡ್ನಲ್ಲಿರುವ ರೆಸಿಡೆನ್ಸಿ ಹೋಟೆಲ್ ಬಳಿ ರಾಘವೇಂದ್ರ ರಾಜ್ ಕುಮಾರ್ ಎರಡು ಕೋಟಿ ರೂಪಾಯಿ ಬೆಲೆ ಬಾಳುವ ಬಿಲ್ಡಿಂಗ್ ಹೊಂದಿದ್ದರು. ಈ ಬಿಲ್ಡಿಂಗ್ ಅನ್ನು ನಾನು ಖರೀದಿಸಿದ್ದೆ ಎಂದು ಸ್ವತಃ ಉಮಾಪತಿ ತಿಳಿಸಿದ್ದು, ಈ ವ್ಯವಹಾರದಲ್ಲಿ ಯಾರೊಂದಿಗೂ ಯಾವುದೇ ತೊಂದರೆ, ಮನಸ್ತಾಪಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ .
ಉಮಾಪತಿ ಬಳಿ ಇದ್ದ ಆಸ್ತಿ ಖರೀದಿಸಲು ದರ್ಶನ್ ಮುಂದಾಗಿದ್ದರು. ಆದರೆ, ಅದನ್ನು ದರ್ಶನ್ಗೆ ನೀಡಲು ನಿರಾಕರಿಸಿದ್ದರು. ಅದು ದೊಡ್ಮನೆ(ರಾಜ್ಕುಮಾರ್ ಕುಟುಂಬ) ಆಸ್ತಿಯಾಗಿದ್ದು, ದರ್ಶನ್ಗೆ ಮಾರಿದ್ರೆ ಬೇರೆ ಆಯಾಮ ಪಡೆದುಕೊಳ್ಳುವ ಭೀತಿಯಿಂದ, ಆಸ್ತಿಯನ್ನ ಕೊಟ್ಟಿರಲಿಲ್ಲ ಅಂತ ಉಮಾಪತಿ ತಿಳಿಸಿದ್ದಾರೆ. ಇನ್ನು ನಟ ದರ್ಶನ್ ಕೋಪ ಮಾಡಿಕೊಂಡಿದ್ದರೂ ಅಂತಾನೂ ಅನ್ನಿಸಲಿಲ್ಲ ಎಂದು ತಿಳಿಸಿದರು.