ಉಡುಂಬ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ವಿಷಯಗಳಿಗೆ ಸೌಂಡ್ ಮಾಡ್ತಿರೋ ಸಿನಿಮಾ. ಗೂಳಿಹಟ್ಟಿ ಸಿನಿಮಾ ನಂತ್ರ ಈ ಸಿನಿಮಾದಲ್ಲಿ ನಟ ಪವನ್ ಸೂರ್ಯ ನಟಿಸುತ್ತಿದ್ದಾರೆ. ತಮಿಳು ಇವರು ನಟ ಧನುಷ್ ತರ ಡೈಲಾಗ್ ಹೊಡೆಯುವ ಮೂಲಕ ಕೆಲ ದಿನಗಳ ಹಿಂದೆ ಸುದ್ದಿಯಲ್ಲಿದ್ದರು. ಇದೀಗ ಉಡುಂಬ ಸಿನಿಮಾ ಮತ್ತೊಮ್ಮೆ ಸುದ್ದಿಯಾಗಿದೆ.
ಈ ವಾರ ತೆರೆಗೆ ಬರೋದಿಕ್ಕೆ ರೆಡಿಯಾಗಿರೋ ಈ ಚಿತ್ರ, ಡಾ ರಾಜ್ ಕುಮಾರ್ ನಟನೆಯ 'ಒಂದು ಮುತ್ತಿನ ಕಥೆ' ಸಿನಿಮಾದಿಂದ ಸ್ಪೂರ್ತಿ ಪಡೆದಿದೆಯಂತೆ. ಈ ಚಿತ್ರದ ಬಗ್ಗೆ ಮಾತನಾಡೋದಿಕ್ಕೆ ನಟ ಪವನ್ ಸೂರ್ಯ, ನಟಿ ಚಿರಶ್ರೀ, ನಿರ್ದೇಶಕ ಶಿವರಾಜ್ ಹಾಗೂ ನಿರ್ಮಾಪಕರಾದ ಹನುಮಂತ ರಾವ್ ಮತ್ತು ವೆಂಕಟ್ ರೆಡ್ಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಣ್ಣಾವ್ರು ನಟಿಸಿರೋ ಒಂದು ಮುತ್ತಿನ ಕಥೆ ನಮಗೆ ಸ್ಫೂರ್ತಿ ಅಂತಾ ಹೇಳಿಕೊಂಡಿದ್ದಾರೆ. ಈ ಚಿತ್ರ ಸಮುದ್ರ ಹಾಗೂ ಮೀನುಗಾರರ ಸುತ್ತೆ ಹಣೆದಿರೋ ಕಥೆಯಂತೆ. ಬೆಸ್ತರ ಹುಡುಗರು ಬಹಳ ಕಟ್ಟು ಮಸ್ತಾಗಿರುತ್ತಾರೆ. ಹಾಗಾಗಿ ಸಹಜವಾಗಿ ಮೂಡಿ ಬರಲಿ ಎಂದು ಪವನ್ ಕೂಡಾ ಸಿಕ್ಸ್ ಪ್ಯಾಕ್ ಬೆಳೆಸಿದ್ದಾರೆ. ಇದರ ಜತೆಯಲ್ಲಿ ಕ್ಯೂಟ್ ಲವ್ ಸ್ಟೋರಿ ಕೂಡ ಇದೆ.