ಸ್ಯಾಂಡಲ್ವುಡ್ನಲ್ಲಿ ಇತ್ತೀಚಿಗೆ ಪ್ರಯೋಗಾತ್ಮಕ ಚಿತ್ರಗಳ ಅಬ್ಬರ ಜೋರಾಗಿದೆ. ಡಿಫರೆಂಟ್ ಟೈಟಲ್ ಇಟ್ಟುಕೊಂಡು ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸುವಲ್ಲಿ ಹೊಸಬರ ತಂಡಗಳು ಯಶಸ್ವಿಯಾಗಿದ್ದು, ಈಗ ಅವುಗಳ ಸಾಲಿಗೆ 'ಉಡುಂಬಾ' ಎಂಬ ಚಿತ್ರ ಕೂಡಾ ಸೇರಿದೆ.
ಧನುಷ್ ರೆಕಾರ್ಡ್ ಬ್ರೇಕ್ ಮಾಡಿದ 'ಉಡುಂಬಾ' ನಾಯಕ ಪವನ್! - ಗೂಳಿಹಟ್ಟಿ
ಆಗಸ್ಟ್ 23ರಂದು 'ಉಡುಂಬಾ' ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನು ನಾಯಕ ಪವನ್ ಶೌರ್ಯ ಚಿತ್ರದಲ್ಲಿ 1:24 ನಿಮಿಷದ ಉದ್ದದ ಡೈಲಾಗನ್ನು ಒಂದೇ ಟೇಕ್ನಲ್ಲಿ ಹೇಳಿ ಗಮನ ಸೆಳೆದಿದ್ದಾರೆ. ಇದು ವಿಐಪಿ ಚಿತ್ರದಲ್ಲಿ ಧನುಷ್ ಹೇಳಿರುವ ಡೈಲಾಗ್ಗಿಂತ ದೊಡ್ಡದಾಗಿದೆ.
ಆಗಸ್ಟ್ 23ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಟ್ರೇಲರ್ ಕೂಡಾ ಬಹಳ ಕುತೂಹಲ ಹುಟ್ಟಿಸಿದೆ. ಚಿತ್ರದ ನಾಯಕ ಪವನ್ ಈ ಹಿಂದೆ 'ಗೂಳಿಹಟ್ಟಿ' ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಪವನ್ ಮಾಸ್ ಹಾಗೂ ಲವರ್ ಬಾಯ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಪವನ್ 1:24 ನಿಮಿಷದ ಡೈಲಾಗೊಂದನ್ನು ಒಂದೇ ಟೇಕ್ನಲ್ಲಿ ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಇಷ್ಟು ಉದ್ದದ ಡೈಲಾಗನ್ನು ಒಂದೇ ಟೇಕ್ನಲ್ಲಿ ಅದೂ ಕೂಡಾ ಉಸಿರು ತೆಗೆದುಕೊಳ್ಳದೆ ಪವನ್ ಹೇಳಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.
ಇದಕ್ಕಾಗಿ ನಟ ಪವನ್ ಶೂಟಿಂಗ್ ಸೆಟ್ನಲ್ಲಿ ನಿರ್ದೇಶಕರಿಂದ ಎರಡು ಗಂಟೆಗಳ ಕಾಲಾವಕಾಶ ಪಡೆದುಕೊಂಡು ಡೈಲಾಗ್ ಪ್ರಾಕ್ಟೀಸ್ ಮಾಡಿದ್ದಾರಂತೆ. ಅಲ್ಲದೆ ಪವನ್ ಈ ರೆಕಾರ್ಡ್ ಮಾಡಲು ಕಾಲಿವುಡ್ ಸ್ಟಾರ್ ಧನುಷ್ ಪ್ರೇರಣೆಯಂತೆ. ಧನುಷ್ ಅಭಿನಯದ 'ವಿಐಪಿ' ಚಿತ್ರದಲ್ಲಿ ಧನುಷ್ ಒಂದು ನಿಮಿಷಕ್ಕೂ ಹೆಚ್ಚು ಕಾಲ ಡೈಲಾಗ್ ಹೊಡೆದಿದ್ದರು. ಈಗ ನಾನು ಅವರನ್ನೇ ಫಾಲೋ ಮಾಡಿ 1 ನಿಮಿಷ 24 ಸೆಕೆಂಡ್ ಉದ್ದದ ಡೈಲಾಗ್ ಹೊಡೆದು ಧನುಷ್ ಅವರ ರೆಕಾರ್ಡ್ ಬ್ರೇಕ್ ಮಾಡಿದ್ದೀನಿ. ಆದರೆ ಇದನ್ನು ನಾನು ದೊಡ್ಡಸ್ತಿಕೆಗಾಗಿ ಹೇಳ್ತಿಲ್ಲ. ನಾನು ಧನುಷ್ ಅವರಿಂದ ಸ್ಫೂರ್ತಿ ಪಡೆದೇ 'ಉಡುಂಬಾ' ಚಿತ್ರದಲ್ಲಿ ಈ ಡೈಲಾಗ್ ಹೇಳಿದ್ದೇನೆ ಎಂದು ಪವನ್ ಹೇಳಿದ್ದಾರೆ.