ದೇವಕಿ
ತಾಯಿವೋರ್ವಳು ಕಳೆದುಹೋದ ತನ್ನ ಮಗಳಿಗಾಗಿ ಒಂಟಿಯಾಗಿ ಹೇಗೆ ಹೋರಾಡುತ್ತಾಳೆ ಎಂಬ ಕಥೆ ಹೊಂದಿರುವ ‘ದೇವಕಿ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ತಾಯಿಯಾಗಿ ನಟಿಸಿದ್ದರೆ, ಪುತ್ರಿ ಐಶ್ವರ್ಯ ಮಗಳಾಗಿ ನಟಿಸಿದ್ದಾರೆ. ಇದು ಐಶ್ವರ್ಯ ಅಭಿನಯದ ಮೊದಲ ಸಿನಿಮಾ. ಸೆಲಬ್ರಿಟಿಗಳಿಗಾಗಿ ಬುಧವಾರ ನಗರದಲ್ಲಿ ‘ದೇವಕಿ’ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು.
ಆರ್ಸಿಜಿ ಸಿನಿಮಾಸ್ ಬ್ಯಾನರ್ ಅಡಿ ರವೀಶ್ ಹಾಗೂ ಅಕ್ಷಯ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪ್ರಿಯಾಂಕ ನಟಿಸಿರುವ ‘ಮಮ್ಮಿ ಸೇವ್ ಮಿ‘ ಸಿನಿಮಾ ನಿರ್ದೇಶಿಸಿದ್ದ ಲೋಹಿತ್ ಅವರೇ ‘ದೇವಕಿ‘ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಹೆಚ್.ಸಿ. ವೇಣು ಛಾಯಾಗ್ರಹಣವಿದ್ದು, ರವಿಚಂದ್ರನ್ ಸಂಕಲನವಿದೆ. ಗುರುಪ್ರಸಾದ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಶಿವಕುಮಾರ್ ಕಲಾ ನಿರ್ದೇಶನವಿರುವ ಸಿನಿಮಾದಲ್ಲಿ ಕಿಶೋರ್, ಸಂಜೀವ್ ಜೈಸ್ವಾಲ್ ಹಾಗೂ ಇನ್ನಿತರರು ನಟಿಸಿದ್ದಾರೆ.