ಖ್ಯಾತ ಕಲಾವಿದರ ಬಾಕ್ಸಾಫೀಸ್ ಪೈಪೋಟಿ ಹಿರಿ ತೆರೆ ಮೇಲೆ ಕೇಳಿದ್ದೇವೆ. ಕೆಲವೊಮ್ಮೆ ಒಬ್ಬ ನಾಯಕನ ಸಿನಿಮಾಗಳು ಸಾಲು ಸಾಲಾಗಿ ಬರುವುದು ಕೂಡಾ ಬೆಳ್ಳಿ ತೆರೆಯಲ್ಲಿ ನೋಡಿದ್ದೇವೆ. ಆದರೆ ಈಗ ಡಿಜಿಟಲ್ ಪ್ಲಾಟ್ಫಾರ್ಮ್ ಬಂದ ಮೇಲೆ ಪ್ರೇಕ್ಷಕ ತನಗಿಷ್ಟ ಬಂದದ್ದನ್ನು ಆರಿಸಿಕೊಳ್ಳುತ್ತಾನೆ. ಪ್ರೇಕ್ಷಕ ಮಹಾ ಪ್ರಭುವಿಗೆ ಬೇಕಾಗಿರುವುದೇ ಒಳ್ಳೆಯ ಸಿನಿಮಾ.
ಇದೀಗ ನಟ ವಸಿಷ್ಠ ಎನ್. ಸಿಂಹ ಅವರ ನಟನೆಯ ಎರಡು ಉತ್ತಮ ಚಿತ್ರಗಳು ಅಮೆಜಾನ್ ಪ್ರೈಮ್ನಲ್ಲಿ ಸಿಗಲಿದೆ. ಸಿಂಹ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡ ‘ಇಂಡಿಯ ವರ್ಸಸ್ ಇಂಗ್ಲೆಂಡ್' ಮತ್ತು ‘ಮಾಯಾಬಜಾರ್ 2016’ ಅಮೆಜಾನ್ ಪ್ರೈಮ್ನಲ್ಲಿ ಸಿಗಲಿದೆ. ಈ ಎರಡು ಸಿನಿಮಾಗಳು 2020ರಲ್ಲಿ ಬಿಡುಗಡೆ ಆದ ಸಿನಿಮಾಗಳು ಎಂಬುದು ಗಮನಿಸಬೇಕಾದ ವಿಚಾರ.
ವಸಿಷ್ಠ ಸಿಂಹ ಅಭಿನಯದ ಎರಡು ಸಿನಿಮಗಳು ಅಮಜಾನ್ ಪ್ರೈಮ್ನಲ್ಲಿ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಇಷ್ಟು ಬೇಗ ಸಿನಿಮಗಳು ಸಿಕ್ಕಿದ ಮೇಲೆ ಪ್ರೇಕ್ಷಕ ಚಿತ್ರ ಮಂದಿರದತ್ತ ಕಾಲಿಡುವುದು ಕಷ್ಟವೇ. ಆದರೂ ತಂತ್ರಜ್ಞಾನ ಬೆಳದಂತೆ ನಾವೂ ಸಾಗಬೇಕಾಗಿದೆ.
ನಾಗತಿಹಳ್ಳಿ ಚಂದ್ರಶೇಖರ್ ಅವರ 'ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರವು ಅಮೆಜಾನ್ ಪ್ರೈಮ್ನಲ್ಲಿ ವಿಶ್ವಾದ್ಯಂತ ತೆರೆ ಕಂಡಿದೆ. ಕೊರೊನಾ ದಾಳಿಯಿಂದ ಮನೆಯಲ್ಲಿ ಕುಳಿತಿರುವವರಿಗೆ ಮನರಂಜನೆಯ ಸುಗ್ಗಿ ನೀಡುತ್ತಿದೆ. ಅಸಂಖ್ಯಾತ ಅನಿವಾಸಿ ಕನ್ನಡಿಗರು ಅಮೆರಿಕಾ, ಇಂಗ್ಲೆಂಡ್ ಮುಂತಾದ ದೇಶಗಳಿಂದ ಪ್ರಶಂಸೆಯ ಮಹಾಪೂರವನ್ನೇ ಕಳುಹಿಸುತ್ತಿದ್ದಾರೆ.
ಇದೀಗ ಭಾರತದಲ್ಲೂ ಪ್ರದರ್ಶನ ಕಂಡು ಅಪಾರ ಮೆಚ್ಚುಗೆ ಗಳಿಸುತ್ತಿದೆ. ಬಹುಭಾಗ ಇಂಗ್ಲೆಂಡಿನಲ್ಲಿ ಜತೆಗೆ ಭಾರತದುದ್ದಗಲಕ್ಕೂ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ನಾಡಗೀತೆಯೂ ರಾಷ್ಟ್ರಗೀತೆಯೂ ಬೇರೆ ಸ್ವರೂಪದಲ್ಲಿವೆ. ಅರ್ಜುನ್ ಜನ್ಯ ಐದು ಹಾಡುಗಳ ಮೂಲಕ ಮನಸೂರೆಗೊಂಡಿದ್ದಾರೆ.
ಚಿತ್ರದಲ್ಲಿ ವಸಿಷ್ಠ ಸಿಂಹ, ಮಾನ್ವಿತಾ, ಪ್ರಕಾಶ್ ಬೆಳವಾಡಿ, ಅನಂತ ನಾಗ್, ಸಾಧು ಕೋಕಿಲಾ, ಸುಮಲತಾ ಅಂಬರೀಷ್ ಅವರನ್ನೊಳಗೊಂಡ ಅದ್ದೂರಿ ತಾರಾಗಣವಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಹಾಗೂ ಗೋವಿಂದು ಅವರ ಜಂಟಿ ನಿರ್ಮಾಣದ ಚಿತ್ರ ‘ಮಾಯಾಬಜಾರ್ 2016’ ನೋಟು ಅಪನಗದೀಕರಣ ಕುರಿತಾದ ಸಿನಿಮಾ. ಇದಕ್ಕೆ ಪ್ರೇಕ್ಷಕರು ಹಾಗೂ ಮಾಧ್ಯಮದಿಂದ ಒಳ್ಳೆಯ ಪ್ರಶಂಸೆ ಸಿಕ್ಕಿದೆ.
ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ಮಿದುನ್ ಮುಕುಂದನ್ ಸಂಗೀತ, ಯೋಗರಾಜ್ ಭಟ್ ಹಾಗೂ ಪವನ್ ಗೀತ ಸಾಹಿತ್ಯ ಒದಗಿಸಿದ್ದಾರೆ. ಈ ಚಿತ್ರವನ್ನು ಮೊದಲ ಬಾರಿಗೆ ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಜಗದೀಶ್ ಸಂಕಲನ, ಹರ್ಷ ಹಾಗೂ ಧನು ನೃತ್ಯ ನಿರ್ದೇಶನ ಮಾಡಿದ್ದಾರೆ.
ರಾಜ್ ಬಿ ಶೆಟ್ಟಿ, ವಸಿಷ್ಠ ಎನ್ ಸಿಂಹ, ಚೈತ್ರ ರಾವ್, ಪ್ರಕಾಷ್ ರೈ, ಅಚ್ಯುತ್ ಕುಮಾರ್, ಸಾಧು ಕೋಕಿಲಾ, ಸುಧಾರಾಣಿ ಹಾಗೂ ಇತರರು ತಾರಗಣದಲ್ಲಿದ್ದಾರೆ. ಒಂದು ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡಾ ಹೆಜ್ಜೆ ಹಾಕಿದ್ದಾರೆ.