‘ಕೋಟಿಗೊಬ್ಬ-3’ ಬಿಡುಗಡೆ ವಿವಾದವು ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಕೆಲವು ವಿತರಕರು ನನಗೆ ಮೋಸ ಮಾಡಿದ್ದಾರೆ. 'ಕೋಟಿಗೊಬ್ಬ-3’ ಬಿಡುಗಡೆಗೆ ಅಡ್ಡಿ ಮಾಡಲು ಷಡ್ಯಂತ್ರ ನಡೆದಿದೆ. ವಿತರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದರು. ಹೀಗಿರುವಾಗಲೇ ಸೂರಪ್ಪ ಬಾಬು ಅವರು ಸಿನಿಮಾ ವಿತರಕರೊಬ್ಬರ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕೊಂದು ವೈರಲ್ ಆಗಿದೆ.
ಇದಕ್ಕೂ ಮುನ್ನ ಚಿತ್ರ ಬಿಡುಗಡೆ ತಡವಾಗಿದ್ದಕ್ಕೆ ಪ್ರತಿಕ್ರಿಯಿಸಿದ್ದ ಕಿಚ್ಚ ಸುದೀಪ್, ಇದರಲ್ಲಿ ಹಿರಿಯ ವಿತರಕರೊಬ್ಬರ ಕೈವಾಡ ಇದೆ. ಈ ಕುರಿತಂತೆ ನಮ್ಮ ಹತ್ತಿರ ಆಡಿಯೋ ತುಣುಕುಗಳು ಇವೆ. ಅದರ ಮೂಲಕ ಉತ್ತರ ಕೊಡುವ ಕೆಲಸ ಮಾಡಲಾಗುವುದು ಎಂದು ಹೇಳಿದ್ದರು.