ಕರ್ನಾಟಕ

karnataka

ETV Bharat / sitara

ಪ್ಯಾನ್​ ಇಂಡಿಯಾದಿಂದ ನಾವು ಉದ್ಧಾರ ಆಗಲ್ಲ ಎಂದ ಜಗ್ಗೇಶ್​ ವಿರುದ್ಧ ತಿರುಗಿ ಬಿದ್ದ ಯಶ್​ ಫ್ಯಾನ್ಸ್​ - ಯಶ್​​ ಅಭಿಮಾನಿಗಳು

ಸೋಷಿಯಲ್​ ಮೀಡಿಯಾದಲ್ಲಿ ಯಶ್​ ಅಭಿಮಾನಿಗಳು ಜಗ್ಗೇಶ್​ ಮೇಲೆ ಗರಂ ಆಗಿದ್ದಾರೆ. ಜಗ್ಗೇಶ್​​​ ವಿಡಿಯೋ ಮತ್ತು ಫೋಟೋಗಳನ್ನು ಬಳಸಿಕೊಂಡು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ.

tweet war between yash fans and jaggesh
ಟ್ವೀಟ್​ ವಾರ್​​ : ಜಗ್ಗೇಶ್ ಮೇಲೆ ರಾಕಿಂಗ್ ಸ್ಟಾರ್ ಯಶ್​​ ಅಭಿಮಾನಿಗಳು ಗರಂ!

By

Published : Nov 26, 2020, 9:17 PM IST

ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸಂಸ್ಕೃತಿ ಕನ್ನಡ ಚಿತ್ರರಂಗದಲ್ಲಿ ಶುರುವಾಯಿತು. ಈ ಸಿನಿಮಾ ಸಕ್ಸಸ್ ಬಳಿಕ ಪೈಲ್ವಾನ್ , ಕುರುಕ್ಷೇತ್ರ ಸಿನಿಮಾಗಳು ಐದು ಭಾಷೆಯಲ್ಲಿ ರಿಲೀಸ್ ಆಗುವ ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ಅಂತಾ ಕರೆಯಿಸಿಕೊಂಡವು. ಆದ್ರೆ, ಪ್ಯಾನ್ ಇಂಡಿಯಾ ಚಿತ್ರಗಳ ಕುರಿತು ನಟ ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿರೋದು ಯಶ್ ಅಭಿಮಾನಿಗಳಗ ಕೆಂಗಣ್ಣಿಗೆ ಗುರಿಯಾಗಿದೆ.

ಜಗ್ಗೇಶ್ ಚಿತ್ರರಂಗ ಪ್ರವೇಶಿಸಿ 40 ವರ್ಷ ಪೂರೈಸಿದ ಹಿನ್ನೆಲೆ ನಟ ಜಗ್ಗೇಶ್ ಅವರು ಮಾಧ್ಯಮಗೋಷ್ಠಿ ನಡೆಸಿ ತಮ್ಮ ಅನುಭವ ಹಂಚಿಕೊಂಡರು. ಈ ವೇಳೆ ಕನ್ನಡ ಸಿನಿಮಾರಂಗ ಹಾಗೂ ಕನ್ನಡ ಕಲಾವಿದರನ್ನು ಉಳಿಸುವಂತಹ ಕೆಲಸ ಆಗಬೇಕಿದೆ ಆದರೆ ಪ್ಯಾನ್ ಇಂಡಿಯಾ ನಮ್ಮನ್ನ ಉದ್ದಾರ ಮಾಡಲ್ಲ ಎಂದು ಜಗ್ಗೇಶ್ ಹೇಳಿದ್ರು.

ಈ ಮಾತು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿ ಯಶ್ ಅಭಿಮಾನಿಗಳನ್ನ ಕೆರಳಿಸಿದೆ. ಯಾಕೆಂದರೆ ಈ ಹಿಂದೆ, ಜಗ್ಗೇಶ್ ಯಶ್ ಜೊತೆ ಇರುವ ಪೋಟೋವನ್ನ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಾಕಿ ನಲ್ಮೆಯ ಸಹೋದರ ಯಶ್ ನಿಮ್ಮ ಕೆಜಿಎಫ್ ಚಿತ್ರ ಕನ್ನಡದ ಕಂಪನ್ನು ವಿಶ್ವ ಮಟ್ಟದ ಕನ್ನಡಿಗರ ಮನಗಳನ್ನ ತಲುಪಲಿ, ಕನ್ನಡ ಚಿತ್ರರಂಗದ ನಗಾರಿ ಸದ್ದು ರಾಷ್ಟ್ರದ ಕೇಳಿಸಲಿ ರಾಯರು ನೂರ್ಕಾಲ ಕಲಾ ಸೇವೆ ಮಾಡುವ ಯೋಗ ನಿಮಗೆ ಲಭಿಸಲಿ ಅಂತಾ ಹೇಳಿದ್ದರು.

ಟ್ವೀಟ್​​​

ಇದೀಗ ಯಶ್​ ಅಭಿಮಾನಿಗಳು ಜಗ್ಗೇಶ್​​ ಮೇಲೆ ಕಿಡಿಕಾರಿದ್ದು, ಡಬ್ಬಲ್ ಮೀನಿಂಗ್ ಸಿನಿಮಾಗಳಿಂದಲೇ ಬೆಳೆದ ನಿಮಗೆ, ನಿಯತ್ತಿಂದ ಒಳ್ಳೊಳ್ಳೆ ಸಿನಿಮಾಗಳನ್ನ ಮಾಡಿ, ಕಷ್ಟ ಪಟ್ಟು ಬೆಳೆದು ಕನ್ನಡ ಚಿತ್ರರಂಗವನ್ನ ವಿಶ್ವ ಮಟ್ಟಕ್ಕೆ ಕೊಂಡೊಯ್ದು ನಮ್ಮ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಅಂತಾ, ಯಶ್ ಆಫೀಶಿಯಲ್ ಫ್ಯಾನ್ಸ್ ಕ್ಲಬ್ ಜಗ್ಗೇಶ್ ವಿರುದ್ಧ ಕಿಡಿಕಾರಿದ್ದಾರೆ.

ಟ್ವೀಟ್​​​

ಇನ್ನು ಅಭಿಮಾನಿಯೊಬ್ಬನ ಕಾಮೆಂಟ್‌ಗೆ ಪ್ರತಿಕ್ರಿಯಿಸಿರುವ ಜಗ್ಗೇಶ್, ಕನ್ನಡ ಚಿತ್ರರಂಗ ಬೆಳೆಯುವ ಯುವನಟ ನಟಿಗಾಗಿ ಆಡಿದ ಮಾತಿಗೆ ಹೀಗಾ? ಪರವಾಗಿಲ್ಲಾ ಮಕ್ಕಳು ಎಷ್ಟೆ ಬೆಳೆದರು ತಂದೆಯ ಮುಂದೆ ಮಕ್ಕಳೆ ವಿನಃ ತಂದೆಯಾಗಲ್ಲಾ. ಶಿವಣ್ಣ, ಪುನೀತ್, ದರ್ಶನ್, ಗಣೇಶ್, ವಿಜಿ ಪ್ಯಾನ್ ಇಂಡಿಯಾ ನಂಬದೆ ಕನ್ನಡ ಕನ್ನಡಿಗರ ಸೀಮೆಯಲ್ಲೆ ಕನ್ನಡದ ಕಲಾವಿದ ತಂತ್ರಜ್ಞರ ಬೆಳಸಿ ತಾವು ಇದ್ದಾರೆ. ನಾನು ಇರುವೆ. ನಮಗೆ 100% ಕನ್ನಡ ಜನ ಸಾಕು ಎನ್ನುವ ಮೂಲ ತಮ್ಮ ಟ್ವಿಟ್ಟರ್​​​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಟ್ವೀಟ್​​​

ಆದರೆ ಜಗ್ಗೇಶ್ ಕೆಜಿಎಫ್ ಸಿನಿಮಾ ಹಿಟ್ ಆದಾಗ ಆಡಿದ ಮಾತುಗಳ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಜಗ್ಗೇಶ್ ಈಗ ಯಶ್ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾರೆ.

ABOUT THE AUTHOR

...view details