ಎಕ್ಸ್ಕ್ಯೂಸ್ ಮೀ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟು ಒಂದಷ್ಟು ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಿ ಸೈ ಅನಿಸಿ ಕೊಂಡಿದ್ದ ನಟ ಸುನೀಲ್ ರಾವ್ 2010 ರತ್ನಜ ನಿರ್ದೇಶನದ ಪ್ರೇಮಿಸಂ ಚಿತ್ರದ ನಂತ್ರ ದಿಢೀರ್ ಅಂತ ಚಿತ್ರರಂಗದಿಂದ ಕಾಣೆಯಾದ್ರು. ಆದ್ರೆ ಈಗ ಮತ್ತೆ ಸುನೀಲ್ ರಾವ್ 'ತುರ್ತು ನಿರ್ಗಮನ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ.
ಹೌದು ಬರೋಬರಿ 9 ವರ್ಷಗಳ ನಂತ್ರ ಸುನೀಲ್ ಮತ್ತೆ ಬಣ್ಣ ಹಚ್ಚಿದ್ದು, ಒಂದು ವಿಭಿನ್ನ ಪಾತ್ರದ ಮೂಲಕ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಅಲ್ಲದೇ ಈಗಾಗಲೇ 'ತುರ್ತುನಿರ್ಗಮನ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಇಂದು ಚಿತ್ರತಂಡ ಚಿತ್ರದ ಟ್ರೈಲರ್ ಲಾಂಚ್ ಮಾಡಿದೆ.
ಚಿತ್ರವನ್ನು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಹೇಮಂತ್ ಕುಮಾರ್ ನಿರ್ದೇಶನ ಮಾಡಿದ್ದು, ಒಂದು ಡಿಫರೆಂಟ್ ಸಬ್ಜೆಕ್ಟ್ ಮೂಲಕ ಎಮರ್ಜನ್ಸಿ ಎಕ್ಸೈಟ್ ಮೂಲಕ ಸುನೀಲ್ ರಾವ್ ಜೊತೆ ಗಾಂಧಿನಗರಕ್ಕೆ ಬಂದಿದ್ದಾರೆ. ಮೃತಪಟ್ಟ ಯುವಕನೊಬ್ಬನಿಗೆ ಮತ್ತೆ ಮೂರು ದಿನಗಳು ಜೀವಿಸಲು ಅವಕಾಶ ಸಿಕ್ಕಿದಾಗ ಆತ ಏನೆಲ್ಲ ಮಾಡುತ್ತಾನೆ, ಯಾವ ರೀತಿ ಕನ್ಫ್ಯೂಸ್ ಆಗ್ತಾನೆ ಎನ್ನುವ ಫ್ಯಾಂಟಸಿ ಸಬ್ಜೆಕ್ಟ್ ಅನ್ನು ತೆರೆಮೇಲೆ ತರಲು ನಿರ್ದೇಶಕ ಹೇಮಂತ್ ಕುಮಾರ್ ರೆಡಿಯಾಗಿದ್ದಾರೆ.
ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ವಿಕ್ರಂ ಎಕ್ಸ್ ಲವರ್ ಪಾತ್ರದಲ್ಲಿ ಚಂದ್ರಶೇಖರ್ ನಟಿಸಿದ್ರೆ, ವಿಕ್ರಂ ಹಾಲಿ ಲವರ್ ಪಾತ್ರದಲ್ಲಿ ಕಿರಿಕ್ ಹುಡುಗಿ ಸಂಯುಕ್ತ ಹೆಗಡೆ ಕಾಣಿಸಿದ್ದಾರೆ. ಚಿಕ್ಕಮಕ್ಕಳಿಗೆ ಕ್ರಿಕೆಟ್ ಹೇಳಿಕೊಡುವ ಕೋಚ್ ಪಾತ್ರದಲ್ಲಿ ಸಂಯುಕ್ತ ಕಾಣಿಸಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಒಂದು ಮೊಟ್ಟೆಯ ಕಥೆಯ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ.