ಕರ್ನಾಟಕ

karnataka

ETV Bharat / sitara

ಚಂದನವನದಲ್ಲೊಂದು 'ಟರ್ನಿಂಗ್ ಪಾಯಿಂಟ್' : ಸಿನಿಮಾ ಆಡಿಯೋ ಬಿಡುಗಡೆ - ದಿಶಾ ಪೂವಯ್ಯ

ವಿನು ಮಹೇಶ್ ರೈ ಕನ್ನಡ ಸಿನಿಮಾ ರಂಗಕ್ಕೆ ಹೊಸ ಹೆಜ್ಜೆ ಇಟ್ಟು ‘ಟರ್ನಿಂಗ್ ಪಾಯಿಂಟ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಕೊಡಗಿನ‌ ಕುವರಿ ದಿಶಾ ಪೂವಯ್ಯ ಲೀಡ್ ರೋಲ್ ಪ್ಲೇ ಮಾಡಿದ್ದಾರೆ. ಪ್ರೀತಿ ಹಾಗೂ ತಾಯಿಯ ಸೆಂಟಿಮೆಂಟ್‌ ಎನ್ನುವ ಎರಡು ಹಳಿಗಳ ಮೇಲೆ ಸಾಗುವ ಈ ಚಿತ್ರದಲ್ಲಿ ಆದಿಕೇಶವ್ ಅವರು ಫಸ್ಟ್ ಟೈಂ ಹೀರೊ ಆಗಿ ನಟಿಸಿದ್ದಾರೆ.

'ಟರ್ನಿಂಗ್ ಪಾಯಿಂಟ್' ಸಿನಿಮಾ ಆಡಿಯೋ ಬಿಡುಗಡೆ

By

Published : Jul 1, 2019, 8:36 AM IST

ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾ ನಿರ್ದೇಶನ ಮಾಡಿರುವ ನವ ನಿರ್ದೇಶಕ ವಿನು ಮಹೇಶ್ ರೈ ಅವರ ಜೀವನದಲ್ಲಿ ಒಂದು ‘ಟರ್ನಿಂಗ್ ಪಾಯಿಂಟ್’ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಏಕೆಂದರೆ, ಅವರು ನಿರ್ದೇಶಿಸಿರುವ ‘ಟರ್ನಿಂಗ್ ಪಾಯಿಂಟ್’ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು ನಿನ್ನೆ ಚಿತ್ರದ ಆಡಿಯೋ ಬಿಡಿಗಡೆಯಾಗಿದೆ.

'ಟರ್ನಿಂಗ್ ಪಾಯಿಂಟ್' ಆಡಿಯೋ ಬಿಡುಗಡೆ

ವಿನು ಮಹೇಶ್ ರೈ ಅವರು ಈ ಹಿಂದೆ ತುಳು ಹಾಗೂ ಕೊಡವ ಭಾಷೆಯ ಸಿನಿಮಾಗಳನ್ನುನಿರ್ದೇಶಿಸಿದ್ದರು. ಇದೀಗ ಕನ್ನಡಕ್ಕೆ ಹೊಸ ಹೆಜ್ಜೆ ಇಟ್ಟು, ‘ಟರ್ನಿಂಗ್ ಪಾಯಿಂಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರೀತಿ ಹಾಗೂ ತಾಯಿಯ ಸೆಂಟಿಮೆಂಟ್‌ ಎನ್ನುವ ಎರಡು ಹಳಿಗಳ ಮೇಲೆ ಸಾಗುವ ಈ ಚಿತ್ರದಲ್ಲಿ ಆದಿಕೇಶವ್ ಅವರು ಫಸ್ಟ್ ಟೈಂ ಹೀರೊ ಆಗಿ ನಟಿಸಿದ್ದಾರೆ.

ಇನ್ನೂ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಕೊಡಗಿನ‌ ಕುವರಿ ದಿಶಾ ಪೂವಯ್ಯ ಲೀಡ್ ರೋಲ್ ಪ್ಲೇ ಮಾಡಿದ್ದಾರೆ. ಅಲ್ಲದೆ ದೀಶಾ ಪಾತ್ರ ನೆಗೆಟಿವ್ ಶೇಡ್​​ಲ್ಲಿದ್ದು, ಹೀರೋಗೆ ಟಕ್ಕರ್ ಕೊಡುವಂತಹ ಪಾತ್ರವಾಗಿದೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ. ನಿನ್ನೆ ಚಿತ್ರದ ಎಲ್ಲಾ ಹಾಡುಗಳನ್ನ ಲಾಂಚ್ ಮಾಡಲಾಗಿದೆ. ಕಲಾವಿದರ ಸಂಘದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ,ಹಿರಿಯ ಸಾಹಿತಿ ಪ್ರೊಫೆಸರ್ ದೊಡ್ಡ ರಂಗೇಗೌಡ್ರು ಹಾಗೂ ಲಹರಿ ವೇಲು ಆಗಮಿಸಿ ಚಿತ್ರ ತಂಡಕ್ಕೆ ಶುಭ ಕೋರಿದ್ರು.

ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ವರ್ಕ್​​​ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಆಗಸ್ಟ್ ತಿಂಗಳಿನಲ್ಲಿ ಟರ್ನಿಂಗ್ ಪಾಯಿಂಟ್ ಚಿತ್ರವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ.

ABOUT THE AUTHOR

...view details