ಮಂಗಳೂರು: ಕೊರೊನಾ ವೈರಸ್ ಎಲ್ಲಾ ಉದ್ಯಮಗಳಂತೆ ಸಿನಿಮಾರಂಗಕ್ಕೂ ಹೊಡೆತ ನೀಡಿದೆ. ಈ ಕೊರೊನಾ ಬಗ್ಗೆಯೇ ಸಿನಿಮಾ ಮಾಡಲು ಕೆಲವು ನಿರ್ದೇಶಕ, ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ. ಆಶ್ಚರ್ಯ ಎಂದರೆ ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮಾ ಈಗಾಗಲೇ ಕೊರೊನಾ ಹೆಸರಿನ ಸಿನಿಮಾ ತಯಾರಿಸಿ ಟ್ರೇಲರ್ ಕೂಡಾ ಬಿಡುಗಡೆ ಮಾಡಿದ್ದಾರೆ.
ಇದೀಗ ತುಳು ಭಾಷೆಯಲ್ಲಿ ಕೂಡಾ ಕೊರೊನಾ ಸಂಬಂಧ ಸಿನಿಮಾ ತಯಾರಾಗಲು ಹೊರಟಿದೆ. 'ಜೀಟಿಗೆ' ಎಂಬ ಹೆಸರಿನಲ್ಲಿ ಈ ಚಿತ್ರ ನಿರ್ಮಾಣಕ್ಕೆ ಎಲ್ಲಾ ತಯಾರಿ ನಡೆದಿದ್ದು ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿದ ಕೂಡಲೇ ಸಿನಿಮಾ ಕೆಲಸ ಆರಂಭವಾಗಲಿದೆ. ಶಶಿರಾಜ್ ಕಾವೂರು ಎಂಬುವವರು ಲಾಕ್ಡೌನ್ ವೇಳೆ ಮನೆಯಲ್ಲೇ ಕುಳಿತು ಸ್ಕ್ರೀನ್ಪ್ಲೇ ಜೊತೆಗೆ ಸಾಹಿತ್ಯ ಕೂಡಾ ಬರೆದಿದ್ದಾರೆ. ಈಗಾಗಲೇ ಕಲಾವಿದರ ಆಯ್ಕೆ ಕೂಡಾ ನಡೆದಿದೆ.