ಬಾಲ್ಯದ ನೆನಪುಗಳು, ಬಾಲ್ಯದಲ್ಲಿ ತೆಗೆಸಿಕೊಂಡ ತೆಗೆಸಿಕೊಂಡ ಫೋಟೋಗಳು ನಮಗೆ ಬಹಳ ಅತ್ಯಮೂಲ್ಯ. ಇಂದಿನ ಜಂಜಾಟಗಳನ್ನು ನೆನೆಸಿಕೊಂಡರೆ ಒಮ್ಮೆ ಆ ಬಾಲ್ಯ ತಿರುಗಿ ಬರಬಾರದೆ ಎನ್ನಿಸುತ್ತದೆ. ಅಪರೂಪಕ್ಕೆ ನಮ್ಮ ಕೈಗೆ ಬಾಲ್ಯದ ಯಾವುದಾದರೂ ವಸ್ತುಗಳೋ ಅಥವಾ ಫೋಟೋಗಳು ದೊರೆತರೆ ಆ ಸಂತೋಷದ ಕ್ಷಣವನ್ನು ವರ್ಣಿಸಲು ಸಾಧ್ಯವೇ ಇಲ್ಲ.
ಈ ಸ್ಕೂಲ್ ಫೋಟೋದಲ್ಲಿ ಈಗಿನ ಮೂವರು ಹೀರೋಗಳಿದ್ದಾರೆ...ಕಂಡು ಹಿಡಿಯುವಿರಾ..? - D suresh babu son Rana
ಈ ಫೋಟೋದಲ್ಲಿ ಇರುವ ಮೂವರು ಹೀರೋಗಳು ರಾಣಾ ದಗ್ಗುಬಾಟಿ, ರಾಮ್ಚರಣ್ ತೇಜ, ಅಲ್ಲು ಸಿರಿಷ್. ಈ ಮೂವರೂ ಒಂದೇ ಸ್ಕೂಲ್ನಲ್ಲಿ ಓದುತ್ತಿರುವಾಗ ತೆಗೆದ ಫೋಟೋ ಇದು.

ಅಂದ ಹಾಗೆ ಈ ಫೋಟೋದಲ್ಲಿ ಮೂವರು ಟಾಲಿವುಡ್ ಹೀರೋಗಳಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ, ಬಾಹುಬಲಿ ಬಲ್ಲಾಳ ದೇವ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರಿಷ್ ಮೂವರೂ ಈ ಫೋಟೋದಲ್ಲಿದ್ದಾರೆ. ಈ ಮೂವರು ಟಾಲಿವುಡ್ನಲ್ಲಿ ಹೆಸರು ಮಾಡಿದವರು.
ರಾಮ್ಚರಣ್ ತೇಜ ಸದ್ಯಕ್ಕೆ ಆಚಾರ್ಯ, ಆರ್ಆರ್ಆರ್ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ರಾಣಾ ದಗ್ಗುಬಾಟಿ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರಾಣಾ ಕೈಯ್ಯಲ್ಲಿ 1945, ಹಿರಣ್ಯಕಶ್ಯಪ, ವಿರಾಟಪರ್ವಂ ಸೇರಿ ಮೂರು ಸಿನಿಮಾಗಳಿವೆ. ಇನ್ನು ಅಲ್ಲು ಸಿರಿಷ್ ಬಾಲನಟನಾಗಿ ಚಿತ್ರರಂಗಕ್ಕೆ ಬಂದವರು. ಅಣ್ಣನಂತೆ ದೊಡ್ಡ ಹೆಸರು ಮಾಡದಿದ್ದರೂ 6 ಚಿತ್ರಗಳಲ್ಲಿ ಹೀರೋ ಆಗಿ ನಟಿಸಿ ಟಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ.