ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಶೀರ್ಷಿಕೆಯಿಂದಲೆ ಸದ್ದು ಮಾಡುತ್ತಿರುವ ಚಿತ್ರ ದ್ವಿತ್ವ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಹಿಸುತ್ತಿರುವ ಈ ಚಿತ್ರಕ್ಕೆ ತ್ರಿಶಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ತ್ರಿಶಾ ಮತ್ತೆ ಸ್ಯಾಂಡಲ್ವುಡ್ ಕಡೆ ಮುಖ ಮಾಡುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ಮುಂದಿನ ಚಿತ್ರ ದ್ವಿತ್ವ ಸಿನಿಮಾವನ್ನು ಪವನ್ ಕುಮಾರ್ ನಿರ್ದೇಶಿಸುತ್ತಿದ್ದು, ಹೊಂಬಾಳೆ ಫಿಲ್ಮ್ ಸಂಸ್ಥೆ ನಿರ್ಮಾಪಕ ವಿಜಯ್ ಕಿರಂಗದೂರ್ , ಸಿನಿಮಾಗೆ ತ್ರಿಶಾ ಕೃಷ್ಣನ್ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ನಿರ್ಮಾಪಕ ವಿಜಯ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ದ್ವಿತ್ವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ನಟಿ ತ್ರಿಶಾ 2014ರಲ್ಲಿ ಬಿಡುಗಡೆಯಾದ ಪವರ್ ಚಿತ್ರದಲ್ಲಿ ಪುನೀತ್ ಜೊತೆ ತ್ರಿಶಾ ರೊಮ್ಯಾನ್ಸ್ ಮಾಡಿದ್ದರು. ಇವರಿಬ್ಬರೂ ಕೆಮಿಸ್ಟ್ರಿ ಕೂಡ ಅಭಿಮಾನಿಗಳಿಗೆ ಇಷ್ಟ ಆಗಿತ್ತು. ಈಗ ಏಳು ವರ್ಷಗಳ ಬಳಿಕ ತ್ರಿಶಾ ಕೃಷ್ಣನ್ ಮತ್ತೆ ಸ್ಯಾಂಡಲ್ವುಡ್ ಕಡೆ ಮುಖ ಮಾಡುತ್ತಿದ್ದಾರೆ. ಈ ಮೂಲಕ ಪವರ್ ಸ್ಟಾರ್ ಜೊತೆ ತ್ರಿಶಾ ಕೃಷ್ಣನ್ ಡುಯ್ಯೆಟ್ ಆಡಲಿದ್ದಾರೆ.
ನಿರ್ಮಾಪಕ ವಿಜಯ್ ಕಿರಂಗದೂರ್ ನಿರ್ಮಾಣದ ದ್ವಿತ್ವ ಓದಿ: ಅಲ್ಲು ಅರ್ಜುನ್ 'ಪುಷ್ಪ' ಕನ್ನಡ ಆವೃತ್ತಿಯಲ್ಲಿ ಮೋಡಿ ಮಾಡಲಿದ್ದಾರೆ ವಿಜಯ್ ಪ್ರಕಾಶ್
ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಆಧರಿಸಿರುವ ದ್ವಿತ್ವ ಸಿನಿಮಾದಲ್ಲಿ ತ್ರಿಶಾ ಕೃಷ್ಣನ್ ಪಾತ್ರ ಹೇಗಿರುತ್ತೆ ಅನ್ನೋದು ಕುತೂಹಲ ಹುಟ್ಟಿಸಿದೆ. ನಿರ್ದೇಶಕ ಪವನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಪ್ರೀತಾ ಜಯರಾಮನ್ ಛಾಯಾಗ್ರಹಣವಿದೆ. ತೇಜಸ್ವಿ ಸಂಗೀತ ಇದೆ. ಹೊಂಬಾಳೆ ಫಿಲ್ಮ್ ಸಂಸ್ಥೆಯಡಿ ನಿರ್ಮಾಪಕ ವಿಜಯ್ ಕಿರಂಗದೂರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸೆಪ್ಟೆಂಬರ್ನಲ್ಲಿ ದ್ವಿತ್ವ ಸಿನಿಮಾ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ.