ಸ್ಯಾಂಡಲ್ವುಡ್ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಅಂಥಹದ್ದೇ ಸಿನಿಮಾ ರಾಜಮನೆತನದ ಕಥೆ ಹೇಳಲು ತ್ರಿಪುರ ಎಂಬ ಶೀರ್ಷಿಕೆಯೊಂದಿಗೆ ತೆರೆಮೇಲೆ ಬರಲು ಸಜ್ಜಾಗಿದೆ.
500 ವರ್ಷಗಳ ಹಿಂದಿನ ಕಥೆ ಹೇಳಲು ಬರುತ್ತಿದ್ದಾಳೆ "ತ್ರಿಪುರ" - ಸ್ಯಾಂಡಲ್ವುಡ್
500 ವರ್ಷಗಳ ಹಿಂದಿನ ಕಥೆ ಆಧರಿತ ತ್ರಿಪುರ ಎಂಬ ಚಿತ್ರ ತೆರೆ ಮೇಲೆ ಬರಲು ಸಜ್ಜಾಗಿದ್ದು, ಭಾಗಶಃ ಶೂಟಿಂಗ್ ಕಂಪ್ಲೀಟ್ ಆಗಿದೆ. ಇನ್ನು ಈ ಚಿತ್ರದಲ್ಲಿ ಅಶ್ವಿನಿ ಗೌಡ ರಾಜಮನೆತನದ ವಂಶಸ್ಥರಾಗಿ ನಟಿಸಿದ್ದಾರೆ
![500 ವರ್ಷಗಳ ಹಿಂದಿನ ಕಥೆ ಹೇಳಲು ಬರುತ್ತಿದ್ದಾಳೆ "ತ್ರಿಪುರ"](https://etvbharatimages.akamaized.net/etvbharat/prod-images/768-512-4182963-thumbnail-3x2-mng.jpg)
ಈಗಾಗಲೇ ಭಾಗಶಃ ಶೂಟಿಂಗ್ ಮುಗಿಸಿರೋ ತ್ರಿಪುರ ಚಿತ್ರದಲ್ಲಿ ಅಶ್ವಿನಿ ಗೌಡ ರಾಜಮನೆತನದ ವಂಶಸ್ಥರಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಶಂಕರ್ ನಿರ್ದೇಶಿಸಿದ್ದು, ಬಿ.ಹೇಮಂತ್ ರಾಗಸಂಯೋಜನೆ ಮಾಡಿದ್ದಾರೆ. ಇನ್ನು ಖ್ಯಾತ ಹಾಸ್ಯನಟರಾದ ಡಿಂಗ್ರಿ ನಾಗರಾಜ್ರವರು ಕ್ಯಾಂಟೀನ್ ನಡೆಸುವವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಮಾನಾಥ್ ಹಾಗೂ ಧರ್ಮರವರು ಪೊಲೀಸ್ ಪಾತ್ರದಲ್ಲಿ ಮಿಂಚಲಿದ್ದಾರೆ.
500 ವರ್ಷಗಳ ಹಿಂದಿನ ರಾಜಮನೆತನದ ಕಥೆ ಇದಾಗಿದ್ದು, ಮರ್ಡರ್ ಮಿಸ್ಟ್ರಿಯಾಗಿದ್ದು, ಮಂಗಳೂರು, ಕಾವೇರಿ ನದಿ, ನಂದಿಬೆಟ್ಟ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಿಠಾಯಿ ಮನೆ, ಮಿಂಚು ಹುಳ ಚಿತ್ರದಲ್ಲಿ ನಟಿಸಿದ್ದ ನಿರ್ಮಾಪಕ ಹುಲ್ಲೂರು ಮಂಜುನಾಥ್ ಈ ಚಿತ್ರಕ್ಕೆ ಬಜೆಟ್ ಹಾಕಿದ್ದಾರೆ. ಇನ್ನು ತ್ರಿಪುರ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು ಸದ್ಯದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ.