ಪೊಲೀಸ್ ಪ್ರಕ್ಕಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಜಶೇಖರ್ ನಿರ್ಮಿಸಿರುವ 'ತ್ರಿಕೋನ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯಾವುದೇ ಕಟ್, ಮ್ಯೂಟ್ ಇಲ್ಲದೆ ಯು/ಎ ಅರ್ಹತಾ ಪತ್ರ ನೀಡಿದೆ. ಇನ್ನು ಈ ವರಮಹಾಲಕ್ಷ್ಮಿ ಹಬ್ಬದಂದು ಕನ್ನಡ, ತೆಲುಗು, ತಮಿಳು ಮೂರೂ ಭಾಷೆಗಳಲ್ಲೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
'ತ್ರಿಕೋನ' ಮೋಷನ್ ಪೋಸ್ಟರ್ ಸುಮಾರು 1:32 ನಿಮಿಷ ಅವಧಿಯ ಈ ಮೋಷನ್ ಪೋಸ್ಟರ್ನಲ್ಲಿ ಯಮನಂತೆ ಕಾಣುವ ಅಜಾನುಬಾಹು ಹಾಗೂ ಯಮನ ವಾಹನ ಕೋಣವನ್ನು ತೋರಿಸಲಾಗಿದೆ. ಈ ಮೋಷನ್ ಪೋಸ್ಟರ್ ನೋಡುತ್ತಿದ್ದಂತೆ ನಿಜಕ್ಕೂ ಸಿನಿಮಾ ಬಹಳ ಕುತೂಹಲಕಾರಿಯಾಗಿದೆ ಎಂಬುದು ತಿಳಿಯುತ್ತದೆ. ತೆಲುಗಿನಲ್ಲಿ 'ತ್ರಿಕೋನಂ' ಹಾಗೂ ತಮಿಳಿನಲ್ಲಿ 'ಗೋಸುಲೋ' ಎಂಬ ಹೆಸರಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುವುದು. ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಬಹಳಷ್ಟು ಜನರು ನೋಡಿ ಮೆಚ್ಚಿದ್ದಾರೆ.
'ತ್ರಿಕೋನ' ಮೋಷನ್ ಪೋಸ್ಟರ್ಗೆ ಉತ್ತಮ ಪ್ರತಿಕ್ರಿಯೆ ಈ ಮೋಷನ್ ಪೋಸ್ಟರ್ ಅದ್ಭುತವಾದ ಗ್ರಾಫಿಕ್ಸ್ ಹಾಗೂ ರಿರೇಕಾರ್ಡಿಂಗ್ನೊಂದಿಗೆ ನೋಡುಗರಲ್ಲಿ ಕುತೂಹಲ ಕೆರಳಿಸುತ್ತದೆ. ಮೋಷನ್ ಪೋಸ್ಟರ್ ಕೊನೆಯಲ್ಲಿ ಅಜಾನುಬಾಹು ಪ್ರತ್ಯಕ್ಷನಾಗುವಾಗ " ಚಲ್ ಚಲ್ ಚುಲಾ" ಎಂಬ ಶಬ್ಧ ಕೇಳಿಸುತ್ತದೆ. ಈ ಪದ ಸೋಷಿಯಲ್ ಮೀಡಿಯಾದಲ್ಲಿ ಬಹಳ ಟ್ರೆಂಡಿಂಗ್ನಲ್ಲಿದೆ. ಈ ಮೋಷನ್ ಪೋಸ್ಟರ್ ಕನ್ನಡ ಹಾಗೂ ತೆಲುಗು ಭಾಷೆಗಿಂತ ತಮಿಳಿನಲ್ಲಿ ಹೆಚ್ಚು ಸದ್ದು ಮಾಡಿದೆ.
ಅಚ್ಯುತ್ ಕುಮಾರ್, ಸುಧಾರಾಣಿ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ಮಾಪಕ ರಾಜಶೇಖರ್ ಕಥೆ ಬರೆದಿದ್ದು, '143' ಚಿತ್ರದ ಖ್ಯಾತಿಯ ಚಂದ್ರಕಾಂತ್ ನಿರ್ದೇಶನ ಮಾಡಿದ್ದಾರೆ. ಕನ್ನಡ ವರ್ಷನ್ ಚಂದ್ರಕಾಂತ್ ನಿರ್ದೇಶಿಸಿದ್ದರೆ, ತಮಿಳು ಹಾಗೂ ತೆಲುಗು ವರ್ಷನ್ ರಾಜಶೇಖರ್ ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳಿಗೆ ಸುರೇಂದ್ರನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಶ್ರೀನಿವಾಸ್ ವೆನಕೋಟ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ ಹಾಗೂ ಜಾನಿ, ಚೇತನ್ ಡಿಸೋಜ ಸಾಹಸ ನಿರ್ದೇಶನ ಇದೆ. ಸುರೇಶ್ ಹೆಬ್ಳೀಕರ್, ಲಕ್ಷ್ಮಿ, ಅಚ್ಯುತ್ ಕುಮಾರ್, ಸುಧಾರಾಣಿ, ಸಾಧುಕೋಕಿಲ, ಭಜರಂಗಿ ಮಾರುತೇಶ್, ರಾಜವೀರ್, ಅದಿತಿ ರಾಜ್, ಹಾಸಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.