ಬಿಗ್ ಬಾಸ್ ಮನೆ ಅಂದ್ರೇನೆ ಹಾಗೆ. ನಗು, ಅಳು, ದುಃಖ, ಕೋಪ, ತಾಪ ಇವೆಲ್ಲ ಆ ಮನೆಯಲ್ಲಿ ಕಾಮನ್. ಇನ್ನು ಕೆಲವು ಟಾಸ್ಕ್ಗಳಲ್ಲಿ ನಡೆಯುವ ಕಾಮಿಡಿಗಳನ್ನು ನೋಡಿದ್ರೆ ನಕ್ಕು ನಕ್ಕು ಹೊಟ್ಟೆ ನೋವು ಬರೋದು ಗ್ರಾರೆಂಟಿ.
ಆಲದ ಮರ ವಿಷಯ... ಬಿಗ್ ಬಾಸ್ ಮನೆಯಲ್ಲಿ ಕುರಿಯಾದ ಪ್ರತಾಪ್! - ಕುರಿ ಪ್ರತಾಪ್
ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಟಾಸ್ಕ್ ಕೊಡಲಾಗಿತ್ತು. ಕುರಿ ಪ್ರತಾಪ್ಗೆ ಆಲದ ಮರ ಬುಡ ತಳಿರೊಡೆದೆರಡೆಲೆಯಾಯಿತು ಎಂದು ಹೇಳುಂತೆ ಟಾಸ್ಕ್ನಲ್ಲಿ ಬರೆಯಲಾಗಿತ್ತು. ಇದನ್ನು ಉಚ್ಚರಿಸುವಾಗ ಕುರಿ ಪ್ರತಾಪ್ ಮಾಡಿದ ಆಕ್ಷನ್ ನೋಡುಗರಿಗೆ ನಗೆ ಬುಗ್ಗೆಯನ್ನೇ ಚಿಮ್ಮಿಸುವಂತಿತ್ತು.
ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಟಾಸ್ಕ್ ಕೊಡಲಾಗಿತ್ತು. ಅದೇನಂದ್ರೆ ಕನ್ನಡದ ಒಂದು ಕ್ಲಿಷ್ಟ ವಾಕ್ಯವನ್ನು ನೀಡಲಾಗಿದ್ದು, ಅದನ್ನು ನೋಡಿಕೊಳ್ಳದೇ ಹೇಳಬೇಕಿತ್ತು. ಎಲ್ಲ ಸ್ಪರ್ಧಿಗಳು ಈ ಟಾಸ್ಕ್ನಲ್ಲಿ ಸ್ವಲ್ಪಮಟ್ಟಿಗಾದರೂ ಸರಿಯಾಗಿ ಹೇಳಿದ್ರು. ಆದ್ರೆ ಕುರಿ ಪ್ರತಾಪ್ ಸರದಿ ಬಂದಾಗ ಅವರಿಗೆ ಸಿಕ್ಕ ಚೀಟಿಯಲ್ಲಿ ಆಲದ ಮರ ಬುಡ ತಳಿರೊಡೆದೆರಡೆಲೆಯಾಯಿತು ಎಂದು ಬರೆಯಲಾಗಿತ್ತು. ಇದನ್ನು ಉಚ್ಚರಿಸುವಾಗ ಕುರಿ ಪ್ರತಾಪ್ ಮಾಡಿದ ಆ್ಯಕ್ಷನ್ ನೋಡುಗರಿಗೆ ನಗೆ ಬುಗ್ಗೆಯನ್ನೇ ಚಿಮ್ಮಿಸುವಂತಿತ್ತು.
ಇನ್ನು ನಿನ್ನೆ ನಡೆದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿಯೂ ಕುರಿ ಬಾಯಿಂದ ಈ ವಾಕ್ಯವನ್ನು ಹೇಳಿಸಿದ ಕಿಚ್ಚ, ಇದನ್ನು ಇಂಗ್ಲೀಷ್ನಲ್ಲಿ ಹೇಳಿ ಎಂದರು. ನಂತ್ರ ಟ್ರಾನ್ಸ್ಲೇಟ್ ಮಾಡಿದ ಕುರಿ, ಮಿಲ್ಕ್ ಟ್ರೀ ಅಂಡರ್ ಟೂ ಬ್ರಾಂಚ್ ಅಂತ ಏನೇನೋ ಹೇಳಿದ್ರು. ಇದಕ್ಕೆ ನಕ್ಕ ಕಿಚ್ಚ, ಅದು ಹಾಲದ ಮರ ಅಲ್ಲ ರೀ ಆಲದ ಮರ ಅಂತ ಹೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ರು.