ಕರ್ನಾಟಕ

karnataka

ETV Bharat / sitara

ಅಪ್ಪು ಅಭಿಮಾನಿಗಳಿಗೆ ಗುಡ್​​ ನ್ಯೂಸ್​​: ನಾಳೆ 'ಜೇಮ್ಸ್​​' ಮುಹೂರ್ತ - ಪುನೀತ್​ ರಾಜ್​ ಕುಮಾರ್​​

ಪುನೀತ್​ ಅಭಿನಯನ ಬಹುನಿರೀಕ್ಷಿತ ಮುಂದಿನ ಸಿನಿಮಾ ಜೇಮ್ಸ್​​ ಮುಹೂರ್ತ ನಾಳೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಬೆಂಗಳೂರಿನ  ಶ್ರೀ ಬಾಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 9 ಗಂಟೆಗೆ ಆಯೋಜನೆ ಮಾಡಲಾಗಿದೆ.

tomorrow James movie launch
ನಾಳೆ ಲಾಂಚ್​ ಆಗ್ತಿದ್ದಾನೆ 'ಜೇಮ್ಸ್​​'

By

Published : Jan 18, 2020, 7:54 AM IST

ಪವರ್​​ ಸ್ಟಾರ್​​ ಪುನೀತ್​​ ರಾಜ್​ಕುಮಾರ್​​ ಸದ್ಯ ಯುವರತ್ನ ಸಿನಿಮಾ ಶೂಟಿಂಗ್​ ಮತ್ತು ಪ್ರಮೋಷನ್​​ನಲ್ಲಿ ಬ್ಯುಸಿ ಆಗಿದ್ದಾರೆ. ಇದರ ನಡುವೆಯೇ ತಮ್ಮ ಮೊತ್ತೊಂದು ಸಿನಿಮಾದ ಮುಹೂರ್ತಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ.

ಹೌದು, ಅಪ್ಪು ಅಭಿಮಾನಿಗಳಿಗೆ ಇದೀಗ ಹೊಸದೊಂದು ಸುದ್ದಿ ಸಿಕ್ಕಿದ್ದು, ಜೇಮ್ಸ್​​​​ ಸಿನಿಮಾ ಶೂಟಿಂಗ್​​ ಯಾವಾಗ ಶುರುವಾಗುತ್ತದೆ ಎಂದು ಕಾಯುತ್ತಿದ್ದವರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಯಾಕಂದ್ರೆ ಪುನೀತ್​ ಅಭಿನಯನ ಬಹುನಿರೀಕ್ಷಿತ ಮುಂದಿನ ಸಿನಿಮಾ ಜೇಮ್ಸ್​​ ಮುಹೂರ್ತ ನಾಳೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಬೆಂಗಳೂರಿನ ಶ್ರೀ ಬಾಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 9 ಗಂಟೆಗೆ ಆಯೋಜನೆ ಮಾಡಲಾಗಿದೆ.

ಇನ್ನು ಜೇಮ್ಸ್​​ ಚಿತ್ರಕ್ಕೆ ಚೇತನ್​ ಕುಮರ್​​ ಆ್ಯಕ್ಷನ್​ ಕಟ್​​ ಹೇಳುತ್ತಿದ್ದು, ಕಿಶೋರ್​ ಪ್ರೊಡಕ್ಷನ್​ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಇನ್ನೊಂದು ವಿಶೇಷ ಏನಂದ್ರೆ ಜೇಮ್ಸ್​​ ಸಿನಿಮಾ ಪ್ರಾರಂಭವಾಗುವುದಕ್ಕಿಂತಲೂ ಮೊದಲೇ ಸಿನಿಮಾದ ಒಂದು ಸಣ್ಣ ಟೀಸರ್​​ಅನ್ನು ರಿಲೀಸ್​​ ಮಾಡಿರುವ ಚಿತ್ರತಂಡ, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

ABOUT THE AUTHOR

...view details