ಪ್ರತಿಷ್ಠಿತ ಲಹರಿ ಆಡಿಯೋ ಸಂಸ್ಥೆಯ ಜಿ.ತುಳಸಿರಾಮ್ ನಾಯ್ಡು ವೇಲು ಅವರ ಪುತ್ರಿ ವರ್ಷ ಅವರ ವಿವಾಹ ಆರತಕ್ಷತೆ ಕಳೆದ ಶುಕ್ರವಾರ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಅದ್ಧೂರಿಯಾಗಿ ಜರುಗಿದೆ.
ಲಹರಿ ವೇಲು ಪುತ್ರಿ ವಿವಾಹಕ್ಕೆ ಆಗಮಿಸಿ ಶುಭ ಕೋರಿದ ಟಾಲಿವುಡ್ ದಿಗ್ಗಜರು - undefined
ಲಹರಿ ವೇಲು ಪುತ್ರಿ ವರ್ಷ ವಿವಾಹ ಆರತಕ್ಷತೆ ಕಾರ್ಯಕ್ರಮಕ್ಕೆ ಟಾಲಿವುಡ್ನ ಸಾಕಷ್ಟು ಗಣ್ಯರು ಆಗಮಿಸಿ ನೂತನ ವಧು-ವರರಿಗೆ ಶುಭ ಕೋರಿದ್ದಾರೆ.

ಅಲ್ಲು ಅರವಿಂದ್ ಕುಟುಂಬ
ಸಾಕಷ್ಟು ಗಣ್ಯರು ಈ ಸಮಾರಂಭಕ್ಕೆ ಆಮಿಸಿ ನೂತನ ವಧು-ವರರಿಗೆ ಶುಭ ಕೋರಿದರು. ವರ್ಷ ಕೈ ಹಿಡಿದ ಚರಣ್ ಟಾಲಿವುಡ್ ನಿರ್ಮಾಪಕ ಸುರೇಶ್ ದೇನಿನೇನಿ ಹಾಗೂ ನಾಗಲಕ್ಷ್ಮಿ ಅವರ ಪುತ್ರ. ಸ್ಯಾಂಡಲ್ವುಡ್ನವರು ಮಾತ್ರವಲ್ಲದೆ ಟಾಲಿವುಡ್ ಖ್ಯಾತನಾಮರೂ ಕೂಡಾ ಆರತಕ್ಷತೆಗೆ ಆಗಮಿಸಿ ನವದಂಪತಿಗೆ ಶುಭ ಕೋರಿದ್ದಾರೆ.
ಟಾಲಿವುಡ್ನ ಹಿರಿಯ ನಟ ಬಾಲಕೃಷ್ಣ, ನಿರ್ಮಾಪಕ ರಾಘವೇಂದ್ರ ರಾವ್, ನಿರ್ಮಾಪಕ ಅಲ್ಲು ಅರವಿಂದ್ ದಂಪತಿ, ಅಲ್ಲು ಸಿರಿಶ್, ನಿರ್ಮಾಪಕ ಸುಬ್ಬರಾಮಿ ರೆಡ್ಡಿ, ನಿರ್ಮಾಪಕ ಸುರೇಶ್ ಬಾಬು ಹಾಗೂ ಇನ್ನಿತರ ತೆಲುಗು ಚಿತ್ರರಂಗದ ಗಣ್ಯರು ಆರತಕ್ಷತೆಗೆ ಆಗಮಿಸಿದ್ದರು.