ಕರ್ನಾಟಕ

karnataka

ETV Bharat / sitara

ಸಾಹೋ ಆ್ಯಕ್ಷನ್ ಸೀನ್​​ಗಳ ಗುಟ್ಟು ಬಿಟ್ಟುಕೊಟ್ಟ ಬಾಹುಬಲಿ ಪ್ರಭಾಸ್ - ಹೈವೋಲ್ಟೇಜ್ ಸಿನಿಮಾ ಸಾಹೋ

ಇಂದು ಬೆಂಗಳೂರಲ್ಲಿ ಸಾಹೋ ಚಿತ್ರದ ಪ್ರಮೋಷನ್ ಭರ್ಜರಿಯಾಗೇ ನಡೆಯಿತು. ಟಾಲಿವುಡ್ ನಟ ಪ್ರಭಾಸ್ ತಮ್ಮ ಚಿತ್ರದ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ಮಾಧ್ಯಮಗಳ ಎದುರು ಹಂಚಿಕೊಂಡ್ರು.

tollywood actor prabhas

By

Published : Aug 23, 2019, 10:00 PM IST

ಬಾಹುಬಲಿ ಚಿತ್ರದಿಂದ ವರ್ಲ್ಡ್ ವೈಡ್ ಖ್ಯಾತಿ ಪಡೆದ ಟಾಲಿವುಡ್​ ನಟ ಪ್ರಭಾಸ್ ಅಭಿನಯದ ಹೈವೋಲ್ಟೇಜ್ ಸಿನಿಮಾ ಸಾಹೋ ಇದೇ ತಿಂಗಳು 30ಕ್ಕೆ ತೆರೆ ಕಾಣುತ್ತಿದೆ.

ಬರೋಬ್ಬರಿ ₹350 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಪ್ರಚಾರಕ್ಕಾಗಿ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್​ ಇಂದು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಬಹುನಿರೀಕ್ಷಿತ ಸಾಹೋ ಸಿನಿಮಾದ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ಅವರು ಮಾಧ್ಯಮಗಳ ಎದುರು ರಿವೀಲ್ ಮಾಡಿದ್ರು.

ಬಿಲ್ಲಾ ಸಿನಿಮಾ ನಂತ್ರ ಸಾಹೋ ಚಿತ್ರದಲ್ಲಿ ಪ್ರಭಾಸ್ ನೆಗೆಟಿವ್ ಶೇಡ್​ನಲ್ಲಿ ಕಾಣಿಸಿಕೊಂಡಿರುವ ಸುಳಿವು ನೀಡಿದ್ರು. ಬಾಲಿವುಡ್​ನ ಸೂಪರ್​​-ಡೂಪರ್ ಸಿನಿಮಾ ಶೋಲೆ ತರಹದ ಫ್ಲೈಓವರ್ ಸಾಹೋದಲ್ಲಿದೆ ಎಂದು ಪ್ರಭಾಸ್ ಹೇಳಿದ್ರು. ತಮ್ಮ ಸಿನಿಮಾ ತೆಲುಗು, ಹಿಂದಿ, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ತೆರೆ ಕಾಣುತ್ತಿರುವುದಕ್ಕೆ ಎಕ್ಸೈಟ್ ಆಗಿದ್ದೇನೆ ಎಂದ ಅವರು, ನಿರ್ದೇಶಕ ಸುಜಿತ್‌ ಅದ್ಭುತ ವರ್ಕ್ ಮಾಡಿದ್ದಾರೆ. ಆ್ಯಕ್ಷನ್ ಸೀನ್​​ಗಳನ್ನು ಅದ್ಧೂರಿಯಾಗಿ ಶೂಟ್ ಮಾಡಲಾಗಿದೆ. ಹಾಲಿವುಡ್​ನ 40 ಸ್ಟಂಟ್ ಮಾಸ್ಟರ್​​ಗಳು ಈ ಚಿತ್ರಕ್ಕೆ ವರ್ಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಬರುವ ಕೆಲವೊಂದು ಮೈನವಿರೇಳಿಸುವಂತಹ ಆ್ಯಕ್ಷನ್ ಸೀನ್​​ಗಳನ್ನು ಸಿಜಿ ಇಲ್ಲದೆ ನೈಜವಾಗಿ ಸೆರೆ ಹಿಡಿಯಲಾಗಿದೆ ಎಂದರು.

ಬೆಂಗಳೂರಿನಲ್ಲಿ ಸಾಹೋ ಚಿತ್ರದ ಪ್ರಮೋಷನ್ ​

ಟಾಲಿವುಡ್ ನಟ ಪ್ರಭಾಸ್​, ಬಾಲಿವುಡ್ ನಟಿ ಶ್ರದ್ಧಾ ಕಪೂರ್​ , ಹಿರಿಯ ನಟ ಜಾಕಿಶ್ರಾಫ್, ನೀಲ್‌ ನಿತಿನ್ ಮುಕೇಶ್, ಜಾಕ್ವೆಲಿನ್‌ ಫರ್ನಾಂಡೀಸ್‌, ಕನ್ನಡಿಗ ಪ್ರಕಾಶ್‌ ಬೆಳವಾಡಿ, ಅರುಣ್‌ ವಿಜಯ್‌ ಹೀಗೆ ಬಿಗ್ ಸ್ಟಾರ್ ಕಾಸ್ಟ್ ಹೊಂದಿರುವ ಸಾಹೋ ಫಿವರ್ ಎಲ್ಲೆಡೆ ಜೋರಾಗಿದೆ.

ABOUT THE AUTHOR

...view details