ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರಕ್ಕೆ ಟಾಲಿವುಡ್ ಸ್ಟಾರ್ ನಟ ಜಗಪತಿ ಬಾಬು ಎಂಟ್ರಿಯಾಗಿದೆ.
'ರಾಬರ್ಟ್' ಅಡ್ಡದಲ್ಲಿ ಟಾಲಿವುಡ್ ಸ್ಟಾರ್.. ದಚ್ಚು ವಿರುದ್ಧ ಬಾಬು ಪಾತ್ರ ಯಾವುದು? - undefined
ಜಗಪತಿ ಬಾಬು ರಾಬರ್ಟ್ ಚಿತ್ರತಂಡ ಸೇರಿಕೊಂಡಿದ್ದಾರೆ. ದರ್ಶನ್ ಮತ್ತು ಜಗಪತಿ ಬಾಬು ನಡುವಿನ ದೃಶ್ಯಗಳನ್ನ ನಿರ್ದೇಶಕ ತರುಣ್ ಸುದೀರ್ ಚಿತ್ರೀಸಿಕೊಂಡಿದ್ದಾರಂತೆ.
!['ರಾಬರ್ಟ್' ಅಡ್ಡದಲ್ಲಿ ಟಾಲಿವುಡ್ ಸ್ಟಾರ್.. ದಚ್ಚು ವಿರುದ್ಧ ಬಾಬು ಪಾತ್ರ ಯಾವುದು?](https://etvbharatimages.akamaized.net/etvbharat/prod-images/768-512-3222045-thumbnail-3x2-tollywood.jpg)
ರಾಬರ್ಟ್
ಕಳೆದ ಎರಡು ದಿನಗಳಿಂದ ರಾಬರ್ಟ್ ಶೂಟಿಂಗ್ ನಡೆಯುತ್ತಿದ್ದು, ಈಗ ಜಗಪತಿ ಬಾಬು ಚಿತ್ರತಂಡ ಸೇರಿಕೊಂಡಿದ್ದಾರೆ. ದರ್ಶನ್ ಮತ್ತು ಜಗಪತಿ ಬಾಬು ನಡುವಿನ ದೃಶ್ಯಗಳನ್ನ ನಿರ್ದೇಶಕ ತರುಣ್ ಸುಧೀರ್ ಚಿತ್ರೀಸಿಕೊಂಡಿದ್ದಾರಂತೆ. ರಾಬರ್ಟ್ ಚಿತ್ರದಲ್ಲಿ ಇವರ ಪಾತ್ರ ಯಾವುದು ಎಂಬುದು ರಿವೀಲ್ ಆಗಿಲ್ಲ.
ಪೋಷಕ ಪಾತ್ರಗಳಿಗೆ ಫೇಮಸ್ ಆಗಿರೋ ಜಗಪತಿ ಬಾಬು, ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲಲ್ಲ. ಹಿಂದೆ ಕಿಚ್ಚ ಸುದೀಪ್ ಜೊತೆಗೆ ಬಚ್ಚನ್, ನಿಖಿಲ್ ಗೌಡ ಅವರ ಜಾಗ್ವಾರ್’ನಲ್ಲಿ ಮಿಂಚಿದ್ದರು. ಇದೀಗ ರಾಬರ್ಟ್ ಅಡ್ಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.