ಮೆಗಾಸ್ಟಾರ್ ಚಿರಂಜೀವಿ ಸದ್ಯಕ್ಕೆ 'ಸೈರಾ ನರಸಿಂಹರೆಡ್ಡಿ' ಸಕ್ಸಸ್ ಖುಷಿಯಲಿದ್ದಾರೆ. ತೆಲುಗು ಮಾತ್ರವಲ್ಲ ಕನ್ನಡ ಸೇರಿ ಎಲ್ಲಾ ಭಾಷೆಗಳಲ್ಲೂ ಚಿತ್ರ ಯಶಸ್ವಿಯಾಗಿದೆ. ಇದೀಗ ಚಿರಂಜೀವಿ ತಮ್ಮ 152ನೇ ಸಿನಿಮಾಗೆ ತಯಾರಾಗುತ್ತಿದ್ದು ಚಿತ್ರಕ್ಕೆ ಮುಹೂರ್ತ ಕೂಡಾ ನೆರವೇರಿದೆ.
ಆಂಧ್ರ ಸಿಎಂ ಭೇಟಿ ಮಾಡಿದ ಮೆಗಾಸ್ಟಾರ್.. ಭೇಟಿ ಹಿಂದಿನ ರಹಸ್ಯ ಏನು? - ಆಂಧ್ರ ಸಿಎಂ ಭೇಟಿ ಮಾಡಿ ಸೈರಾ ಸಿನಿಮಾ ನೋಡಲು ಚಿರಂಜೀವಿ ಮನವಿ
ಇತ್ತೀಚೆಗೆ ತೆಲಂಗಾಣ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಮೆಗಾಸ್ಟಾರ್ ಚಿರಂಜೀವಿ ನಿನ್ನೆ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿ ತಮ್ಮ 'ಸೈರಾ ನರಸಿಂಹರೆಡ್ಡಿ' ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.
ಇನ್ನು ಮೆಗಾಸ್ಟಾರ್ ದಂಪತಿ ಇತ್ತೀಚೆಗೆ ಆಂಧ್ರಪ್ರದೇಶ ಸಿಎಂ ಜಗನ್ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಈ ಭೇಟಿಯ ಹಿಂದೆ ಖಂಡಿತ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಸಿಎಂ ಜಗನ್ ಭೇಟಿ ಮಾಡಿರುವ ಚಿರಂಜೀವಿ, ಅವರನ್ನು 'ಸೈರಾ ನರಸಿಂಹರೆಡ್ಡಿ' ಸಿನಿಮಾ ನೋಡುವಂತೆ ಆಹ್ವಾನಿಸಿದ್ದಾರೆ. ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಸಿಎಂ ಜಗನ್ ಅವರನ್ನು ಚಿರಂಜೀವಿ ತಮ್ಮ ಪತ್ನಿ ಸುರೇಖ ಜೊತೆ ಭೇಟಿ ಮಾಡಿ ಹೂಗುಚ್ಛ ನೀಡಿ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಜಗನ್ಮೋಹನ್ ರೆಡ್ಡಿ ಪತ್ನಿ ಭಾರತಿ ಕೂಡಾ ಇದ್ದರು. ನಂತರ ಎಲ್ಲರೂ ಜೊತೆಗೆ ಕುಳಿತು ಊಟ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಚಿರಂಜೀವಿ ತೆಲಂಗಾಣ ರಾಜ್ಯಪಾಲರನ್ನೂ ಭೇಟಿ ಮಾಡಿ ತಮ್ಮ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು.