ಬಾಲಿವುಡ್ ನಟಿ ಟಬು, ಬಹಳ ವರ್ಷಗಳ ನಂತರ 'ಅಲ ವೈಕುಂಠಪುರಮುಲೋ' ಚಿತ್ರದ ಮೂಲಕ ಟಾಲಿವುಡ್ಗೆ ವಾಪಸಾಗಿದ್ದು, ಇಂದು ಅವರ ಹುಟುಹಬ್ಬದ ಗಿಫ್ಟ್ ಆಗಿ ಚಿತ್ರದ ಫಸ್ಟ್ಲುಕನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಇಂದು ಟಬು ಬರ್ತಡೇ....'ಅಲ ವೈಕುಂಠಪುರಮುಲೋ' ಫಸ್ಟ್ಲುಕ್ ರಿಲೀಸ್ - ಹುಟ್ಟುಹಬ್ಬದ ಸಂಭ್ರಮದಲ್ಲಿ ಟಬು
10 ವರ್ಷಗಳ ನಂತರ ಮತ್ತೆ ಟಾಲಿವುಡ್ಗೆ ಬಂದಿರುವ ಟಬು, 'ಅಲ ವೈಕುಂಠಪುರಮುಲೋ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂದು ಟಬು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಗಿಫ್ಟ್ ಆಗಿ ಸಿನಿಮಾದ ಫಸ್ಟ್ಲುಕನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
![ಇಂದು ಟಬು ಬರ್ತಡೇ....'ಅಲ ವೈಕುಂಠಪುರಮುಲೋ' ಫಸ್ಟ್ಲುಕ್ ರಿಲೀಸ್](https://etvbharatimages.akamaized.net/etvbharat/prod-images/768-512-4958204-thumbnail-3x2-tabu.jpg)
ಅಲ್ಲು ಅರ್ಜುನ್, 'ಅಲ ವೈಕುಂಠಪುರಮುಲೋ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವೆಂಕಟೇಶ್ ಜೊತೆ 'ಕೂಲಿ ನಂ 1' ಚಿತ್ರದಲ್ಲಿ ನಟಿಸುವ ಮೂಲಕ ಟಬು ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ 'ನಿನ್ನೇ ಪೆಳ್ಳಾಡತಾ' , 'ಸಿಸಿಂದ್ರಿ' , 'ಪಾಂಡುರಂಗಡು' ಸೇರಿ ಕೆಲವೊಂದು ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಬಾಲಕೃಷ್ಣ ಅವರೊಂದಿಗೆ ನಟಿಸಿದ 'ಪಾಂಡುರಂಗಡು' ಚಿತ್ರ 2008 ರಲ್ಲಿ ಬಿಡುಗಡೆಯಾಗಿತ್ತು. ನಂತರ ಅವರು ಮತ್ತಾವ ತೆಲುಗು ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ಇದೀಗ 10 ವರ್ಷಗಳ ನಂತರ ಮತ್ತೆ ಟಾಲಿವುಡ್ಗೆ ಬಂದಿರುವ ಟಬು, 'ಅಲ ವೈಕುಂಠಪುರಮುಲೋ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ. ಇದಕ್ಕೂ ಮುನ್ನ 'ಜುಲಾಯಿ' ಹಾಗೂ 'ಸನ್ ಆಫ್ ಸತ್ಯಮೂರ್ತಿ' ಸಿನಿಮಾಗಳಲ್ಲಿ ಅವರು ನಟಿಸಿದ್ದರು.