ಕರ್ನಾಟಕ

karnataka

ETV Bharat / sitara

ಇಂದು ಮಾಸ್ತಿಯವರ ಜನ್ಮದಿನ...ಕೊನೆಗೂ ಸಿನಿಮಾ ಆಗಲಿಲ್ಲ ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ - ಇಂದು ಮಾಸ್ತಿಯವರ ಜನ್ಮದಿನ

ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನ ಹಾಗೂ ಪುಣ್ಯಸ್ಮರಣೆ ಇಂದು. ಮಾಸ್ತಿ ಅವರ ಜ್ಞಾನಪೀಠ ಪ್ರಶಸ್ತಿ ವಿಜೇತ 'ಚಿಕವೀರ ರಾಜೇಂದ್ರ ' ಕೃತಿಯನ್ನು ಸಿನಿಮಾ ಮಾಡಲು ಪುಟ್ಟಣ್ಣ ಕಣಗಾಲ್ ಆಸೆ ಪಟ್ಟಿದ್ದರು. ಚಿತ್ರದಲ್ಲಿ ಶ್ರೀನಿವಾಸ ಮೂರ್ತಿ ಕೂಡಾ ನಟಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು.

Today is Masti Venkatesha Iyengar Birthday
ಮಾಸ್ತಿಯವರ ಜನ್ಮದಿನ

By

Published : Jun 6, 2020, 11:25 AM IST

ಇಂದು ಜ್ಞಾನಪೀಠಪ್ರಶಸ್ತಿ ವಿಜೇತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್​ ಅವರ ಜನ್ಮದಿನ. ಸಣ್ಣ ಕಥೆಗಳ ಜನಕ, ಮಾಸ್ತಿ ಕನ್ನಡದ ಆಸ್ತಿ ಎಂದೇ ಖ್ಯಾತರಾಗಿದ್ದ ಈ ಮಹಾನ್ ವ್ಯಕ್ತಿಯನ್ನು ಸಾಹಿತ್ಯ ಲೋಕ, ಚಿತ್ರರಂಗದ ಗಣ್ಯರು ಇಂದು ನೆನೆದಿದ್ದಾರೆ. ಮಾಸ್ತಿ ಅವರು ನಿಧನರಾಗಿದ್ದು ಕೂಡಾ ಇದೇ ದಿನದಂದು.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು 95ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಸಾರಸ್ವತ ಲೋಕದಲ್ಲಿ ಮಾತ್ರವಲ್ಲ ಅವರು ಮೈಸೂರು ಸಂಸ್ಥಾನದಲ್ಲಿ ಅಸಿಸ್ಟಂಟ್ ಕಮಿಷನರ್ ಆಗಿ ಸೇವೆ ಸಲ್ಲಿಸುವಾಗ ಕೂಡಾ ಹೊಸ ಯೋಜನೆಗಳನ್ನು ಜಾರಿಗೆ ತಂದವರು.

ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್

ಮಾಸ್ತಿಯವರ 'ಕಾಕನ ಕೋಟೆ' ಕಾದಂಬರಿ ಸಿನಿಮಾ ಆಗಿ ತಯಾರಾಗಿತ್ತು. ಈ ಚಿತ್ರವನ್ನು 1977 ರಲ್ಲಿ ಬಿಡುಗಡೆ ಮಾಡಲಾಯ್ತು. ಗಿರೀಶ್ ಕಾರ್ನಾಡ್ ಈ ಸಿನಿಮಾಗೆ ಚಿತ್ರಕಥೆ ಬರೆದಿದ್ದರು ಜೊತೆಗೆ ಸಹಾಯಕ ನಿರ್ದೇಶಕರಾಗಿ ಕೂಡಾ ಕೆಲಸ ಮಾಡಿದ್ದರು. ಡಾ. ಸಿ. ಅಶ್ವತ್ಥ್​​​​​​​​​​​​​​​​​​​​​​ ಮಾಸ್ತಿ ಅವರ ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ್ದರು. ಸಿ.ಆರ್. ಸಿಂಹ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಲೋಕೇಶ್, ಶ್ರೀನಾಥ್, ಲೋಕನಾಥ್, ಕೃಷ್ಣರಾಜ್, ಲಾವಣ್ಯ, ಗಿರಿಜಾ ಲೋಕೇಶ್, ವೆಂಕಟಾಚಲ, ವಾಸುದೇವಮೂರ್ತಿ ಹಾಗೂ ಇತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

1983 ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮಾಸ್ತಿ ಅವರ 'ಚಿಕವೀರ ರಾಜೇಂದ್ರ' ಕೃತಿಯನ್ನು ಕೂಡಾ ಶ್ರೀನಿವಾಸ ಮೂರ್ತಿ ಅವರೊಂದಿಗೆ ಸಿನಿಮಾ ಮಾಡಬೇಕೆಂದು ಪುಟ್ಟಣ್ಣ ಕಣಗಾಲ್​ ಆಸೆ ಪಟ್ಟಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಪುಟ್ಟಣ್ಣ ಕಣಗಾಲ್ ನಿಧನರಾದ ನಂತರ ಅವರ ಕೃತಿಯನ್ನು ನಿರ್ದೇಶನ ಮಾಡಲು ಯಾರೂ ಪ್ರಯತ್ನಿಸಲಿಲ್ಲ.

ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ 'ಚಿಕವೀರ ರಾಜೇಂದ್ರ '

ಹಿರಿಯ ನಟ, ಭೋಜರಾಜ ಎಂದೇ ಖ್ಯಾತರಾದ ಶ್ರೀನಿವಾಸಮೂರ್ತಿ ಅವರು ಇಂದು ಹಿರಿಯ ಚೇತನ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ಪುಟ್ಟಣ್ಣ ಕಣಗಾಲ್ ಅವರನ್ನು ನೆನೆದಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಬಹಳವಾಗಿ ಎದುರು ನೋಡುತ್ತಿದ್ದ ಸಿನಿಮಾ 'ಚಿಕವೀರ ರಾಜೇಂದ್ರ '. ಪುಟ್ಟಣ್ಣ ಕಣಗಾಲ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಸಮಯದಲ್ಲಿ ನನ್ನ ಬಳಿ 'ಚಿಕವೀರ ರಾಜೇಂದ್ರ ' ಬಗ್ಗೆ ತಯಾರಿ ಮಾಡಿಕೊಳ್ಳಿ ಎಂದು ಹೇಳಿದ್ದರು. ಶ್ರೀನಿವಾಸಮೂರ್ತಿ ಅವರು ಅದಕ್ಕೆ ಬೇಕಾದ ವಿಚಾರಗಳನ್ನು ಕಲೆಹಾಕಿ ಸಿದ್ಧತೆ ಕೂಡಾ ಮಾಡಿಕೊಂಡಿದ್ದರು.

ಪುಟ್ಟಣ್ಣ ಕಣಗಾಲ್ ಅವರ 'ರಂಗನಾಯಕಿ' ಹಾಗೂ 'ಅಮೃತ ಘಳಿಗೆ' ಸಿನಿಮಾದಲ್ಲಿ ಕೂಡಾ ಶ್ರೀನಿವಾಸ ಮೂರ್ತಿ ಅವರು ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಆದ್ದರಿಂದ 'ಚಿಕವೀರ ರಾಜೇಂದ್ರ ' ಸಿನಿಮಾಗಾಗಿ ಅವರೇ ಮುಂದೆ ನಿಂತು ತಯಾರಿ ಮಾಡಿಕೊಂಡಿದ್ದರು. ಆದರೆ ಕೊನೆಗೂ ಆ ಆಸೆ ನೆರವೇರಲಿಲ್ಲ. ಇನ್ನು ದೂರದರ್ಶನದಲ್ಲಿ ಈ ಕೃತಿ 'ಅಂತಿಮ ರಾಜ ' ಎಂಬ ಹೆಸರಿನಲ್ಲಿ ಸಿದ್ಧವಾಯ್ತು. ಆದರೆ ಆ ಧಾರಾವಾಹಿಗೆ ಕೂಡಾ ವಿರೋಧ ವ್ಯಕ್ತವಾಗಿದ್ದರಿಂದ ಅದೂ ಕೂಡಾ ಅರ್ಧದಲ್ಲೇ ನಿಂತುಹೋಯ್ತು.

ಹಿರಿಯ ನಟ ಶ್ರೀನಿವಾಸ ಮೂರ್ತಿ

ಅಂದಹಾಗೆ ಚಿಕವೀರ ರಾಜೇಂದ್ರ ಅವರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಕೊಡಗಿನ ವೀರ ಇವರು. ಬ್ರಿಟಿಷರ ವಿರೋಧ ಕಟ್ಟಿಕೊಂಡ ಕೊಡಗಿನ ಕೊನೆಯ ರಾಜ. ಬ್ರಿಟಿಷರು ಇವರನ್ನು 1834 ರಲ್ಲಿ ಕೊಡಗಿನ ಅರಮನೆಯಲ್ಲಿ ಬಂಧಿಯಾಗಿ ಇಟ್ಟಿದ್ದರು. 1859 ರಲ್ಲಿ ಚಿಕವೀರ ರಾಜೇಂದ್ರ ಕಾಲವಾದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನ, ಪುಣ್ಯಸ್ಮರಣೆ ಜೊತೆಗೆ ಇಂದು ಶಿಕ್ಷಣ ತಜ್ಞ, ಮನೋವಿಜ್ಞಾನಿ ಹೆಚ್​​​​​. ನರಸಿಂಹಯ್ಯ (ಡಾ. ವಿಷ್ಣುವರ್ಧನ್​​ ಅವರ ಗುರುಗಳು) ಅವರ 100 ನೇ ಜನ್ಮದಿನ. ಅಷ್ಟೇ ಅಲ್ಲ ಮಾಜಿ ಮುಖ್ಯಮಂತ್ರಿ, ದಿವಂಗತ ದೇವರಾಜ್​​​ ಅರಸು ನಿಧನರಾದ ದಿನ ಇಂದು.

ABOUT THE AUTHOR

...view details