ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಂದಾಕ್ಷಣ ನಮಗೆ ನೆನಪಾಗೋದು ಅವರ ಅದ್ಭುತ ಅಭಿನಯ ಹಾಗೂ ನೃತ್ಯ. ತಂದೆ ವರನಟ ಡಾ.ರಾಜ್ ಕುಮಾರ್ ಆದರ್ಶಗಳನ್ನು ಪಾಲಿಸುತ್ತಿರುವ ಶಿವಣ್ಣ ನಟರಷ್ಟೇ ಅಲ್ಲ, ಅದ್ಭುತ ಗಾಯಕರೂ ಆಗಿದ್ದಾರೆ. ಅಷ್ಟಕ್ಕೂ ಶಿವರಾಜ್ ಕುಮಾರ್ ಸಿಂಗರ್ ಆಗಿದ್ದೇ ಒಂದು ಇಂಟ್ರೆಸ್ಟಿಂಗ್ ಕಹಾನಿ.
ಚಿತ್ರರಂಗದಲ್ಲಿ ನಾಯಕ ನಟರು ಹಾಡ್ತಾರೆ. ಆದರೆ ಸುಶ್ರಾವ್ಯವಾಗಿ ಹಾಡಲು ಅವರಿಗೆ ಧ್ವನಿ ಚೆನ್ನಾಗಿಬೇಕು ಮತ್ತು ಅವರಿಗೆ ಹಾಡೋಕೆ ಬರಬೇಕು ಅನ್ನುವುದು ರೂಢಿಗತ ನಿಯಮವಾಗಿತ್ತು. ಇದಕ್ಕೆ ಹಿಂದಿನ ಕಾಲದ ಕಿಶೋರ್ ಕುಮಾರ್ ಮುಂತಾದವರೇ ಸಾಕ್ಷಿ. ಆದರೆ ಬರುಬರುತ್ತಾ ಕನ್ನಡ ಚಿತ್ರರಂಗದಲ್ಲಿ ಬದಲಾಣೆಯ ಗಾಳಿ ಬೀಸತೊಡಗಿತು. ಯಾವಾಗ ಡಾ.ರಾಜ್ ಕುಮಾರ್ ಅಭಿನಯದ ಜೊತೆಗೆ ಹಾಡು ಹಾಡೋಕೆ ಶುರು ಮಾಡಿದ್ರೋ ನಟ-ನಟಿಯರು ಕೂಡಾ ಹಾಡೋಕೆ ಆರಂಭಿಸಿದರು.
'ಆನಂದ್' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ 'ಮಿಸ್ಟರ್ ಪುಟ್ಟಸ್ವಾಮಿ' ಮೊದಲು ಅಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟರು. ನಂತರದ ದಿನಗಳಲ್ಲಿ ಸಿನಿಮಾಗಳಿಗೆ ತಾವೇ ಹಾಡು ಹಾಡೋಕೆ ಶುರುಮಾಡಿದರು. 1988ರಲ್ಲಿ ನಮ್ಮದೇ ಅಭಿನಯದ ರಣರಂಗ ಸಿನಿಮಾದಲ್ಲಿ 'ಓ ಮೇಘವೇ ನಿಧಾನವಾಗಿ ನೀ ಬಾ' ಎಂಬ ಡ್ಯುಯೆಟ್ ಹಾಡನ್ನು ಹಾಡಿದ್ರು. ಇದಕ್ಕೆ ಕಾರಣ ಸಂಗೀತ ನಿರ್ದೇಶಕ ಹಂಸಲೇಖಾ ಅನ್ನೋದು ಸ್ವತಃ ಶಿವರಾಜ್ ಕುಮಾರ್ ಅವರೇ ಹೇಳುವ ಮಾತು.
'ರಣರಂಗ' ಸಿನಿಮಾದಿಂದ ಗಾಯಕರಾದ ಸೆಂಚುರಿ ಸ್ಟಾರ್ ಮತ್ತೆ ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಮತ್ತೆ ಹಾಡಿದರು.1990ರಲ್ಲಿ ಬಂದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದು, ಅಣ್ಣನಿಗೆ ಜೊತೆಯಾಗಿ ರಾಘವೇಂದ್ರ ರಾಜ್ ಕುಮಾರ್ ಬೊಂಬಾಟೋ ಬೊಂಬಾಟು ನಿನ್ನ ಆಟ ಬೊಂಬಾಟೋ ಎಂಬ ಹಾಡಿಗೆ ಧ್ವನಿಗೂಡಿಸಿದ್ದರು.
90 ರದಶಕದಲ್ಲಿ ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ಅವರದ್ದು ಹಿಟ್ ಜೋಡಿ ಎಂದು ಕರೆಯಿಸಿಕೊಂಡಿತ್ತು. ಇವರಿಬ್ಬರ ಕಾಂಬಿನೇಶನ್ನಲ್ಲಿ ಬಂದ 'ತಾನನ ತಂದಾನಾ ಕುಣಿಸಿದ ಯವ್ವನಾ' ಎಂಬ ಡ್ಯೂಯೆಟ್ ಹಾಡು ಸೂಪರ್ ಹಿಟ್ ಆಗಿತ್ತು. ಉದಯ್ ಕುಮಾರ್ ಸಾಹಿತ್ಯಕ್ಕೆ ಉಪೇಂದ್ರ ಕುಮಾರ್ ಸಂಗೀತವಿತ್ತು. ಈ ವೇಳೆ ಬಾಕ್ ಡೂ ಬ್ಯಾಕ್ ಸಿನಿಮಾದಲ್ಲಿ ನಟಿಸುತ್ತಿದ್ದ ಶಿವರಾಜ್ಕುಮಾರ್ ನಟನೆಯಲ್ಲಿ ಹೆಚ್ಚು ಬ್ಯುಸಿಯಾದರು.