ಕರ್ನಾಟಕ

karnataka

ETV Bharat / sitara

ನಾಳೆ ರಾಜ್ಯಾದ್ಯಂತ 'ಸಿಂಹಸೇನಾ' ಬಿಡುಗಡೆ: 70 ಚಿತ್ರಮಂದಿರದಲ್ಲಿ ಪ್ರದರ್ಶನ - undefined

ನಾಳೆ ರಾಜ್ಯಾದ್ಯಂತ 'ಸಿಂಹಸೇನಾ' ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಿರ್ದೇಶಕ‌ ಎಸ್.ರಾಮು ಈಟಿವಿ ಭಾರತ ನೊಂದಿಗೆ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಿಂಹಸೇನಾ ಚಿತ್ರ ತಂಡ

By

Published : Jul 11, 2019, 8:49 PM IST

ಬಳ್ಳಾರಿ:ಬಾಲ್ಯದಲ್ಲಿ ಮದ್ಯದ ಅಂಗಡಿಗಳಲ್ಲಿ ಚಿಕ್ಕ ಮಕ್ಕಳು ಕೆಲಸ ಮಾಡಬಾರದು, ಅನಾಥ ಮಕ್ಕಳ ಬಗ್ಗೆ ಜನರಲ್ಲಿ ಕಾಳಜಿ ಇರಬೇಕು ಎಂಬ ವಿಚಾರಗಳನ್ನು ಅರ್ಥಪೂರ್ಣವಾಗಿ ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು 'ಸಿಂಹಸೇನಾ' ಚಿತ್ರದ ನಿರ್ದೇಶಕ‌ ಎಸ್.ರಾಮು ಹೇಳಿದರು.

ಸಿಂಹಸೇನಾ ಚಿತ್ರದ ನಿರ್ದೇಶಕ‌ ಎಸ್.ರಾಮು

ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿನ ಪತ್ರಿಕಾ ಭವನದಲ್ಲಿ ಈಟಿವಿ ಭಾರತ ನೊಂದಿಗೆ ಸಿಂಹಸೇನಾ ಚಿತ್ರ ನಿರ್ದೇಶಕ ಎಸ್. ರಾಮು ಮಾತನಾಡಿ, ಶುಕ್ರವಾರ ರಾಜ್ಯಾದ್ಯಂತ ಸಿಂಹಸೇನಾ ಚಿತ್ರ ಬಿಡುಗಡೆಯಾಗುತ್ತದೆ.

ಸುಮಾರು 80 ಲಕ್ಷ ರೂ ಬಜೆಟ್‌ನ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಬಳ್ಳಾರಿ ತಾಲೂಕು ದಮ್ಮೂರು ಗ್ರಾಮದ ಸುರೇಶ್ ರೆಡ್ಡಿ, ನರೇಂದ್ರ ಚೌಧರಿ ನಿರ್ಮಾಪಕರಾಗಿದ್ದಾರೆ.

ಸಿಂಹಸೇನ ಚಿತ್ರದ ಪೋಸ್ಟ್

ರಂಗಭೂಮಿ ಕಲಾವಿದ ಕುಲದೀಪ್, ಮನಸ್ವಿ ಪ್ರೇಮಾ ಚಿತ್ರದಲ್ಲಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ರಾಜ್ಯಾದ್ಯಂತ 70 ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಎಸ್. ರಾಮು ತಿಳಿಸಿದರು.

For All Latest Updates

TAGGED:

ABOUT THE AUTHOR

...view details