ಚೆನ್ನೈ:ಮನೋಜ್ ಬಾಜಪೇಯ್ ಮುಖ್ಯಭೂಮಿಕೆಯ 'ದಿ ಫ್ಯಾಮಿಲಿ ಮ್ಯಾನ್-2' ವೆಬ್ ಸೀರಿಸ್ಗೆ ಪ್ರಾರಂಭದಲ್ಲೇ ವಿಘ್ನ ಎದುರಾಗಿದೆ. ಇದನ್ನ ನಿಷೇಧ ಮಾಡುವಂತೆ ಇದೀಗ ತಮಿಳುನಾಡು ಸಚಿವ ಪತ್ರ ಬರೆದಿದ್ದಾರೆ.
ವೆಬ್ ಸೀರಿಸ್ನಲ್ಲಿ ಶ್ರೀಲಂಕಾ ತಮಿಳರನ್ನ ನೆಗೆಟಿವ್(ಉಗ್ರಗಾಮಿಗಳಂತೆ) ರೂಲ್ನಲ್ಲಿ ತೋರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗಾಗಿ ಸೀರಿಸ್ ಬ್ಯಾನ್ ಮಾಡುವಂತೆ ಇದೀಗ ತಮಿಳುನಾಡು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಮನೋ ತಂಗರಾಜ್ ಪತ್ರ ಬರೆದಿದ್ದಾರೆ.
ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿರುವ ಪ್ರಕಾಶ್ ಜಾವ್ಡೇಕರ್ಗೆ ಪತ್ರ ಬರೆಯಲಾಗಿದ್ದು, ತಕ್ಷಣವೇ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸೀರಿಸ್ ನಿಲ್ಲಿಸುವಂತೆ ಅಥವಾ ಬ್ಯಾನ್ ಮಾಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಟೂಲ್ಕಿಟ್ ಪ್ರಕರಣ: ಟ್ಟಿಟರ್ ಕಚೇರಿಗೆ ಭೇಟಿ ನೀಡಿದ ದೆಹಲಿ ಪೊಲೀಸರು
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯಸಭಾ ಸದಸ್ಯರಾಗಿರುವ ವೈಕೊ ಸಹ ಪತ್ರ ಬರೆದು ನಿಷೇಧ ಹೇರುವಂತೆ ಆಗ್ರಹಿಸಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಸೀರಿಸ್-2 ಜೂನ್ 4ರಂದು ಅಮೇಜಾನ್ ಫ್ರೈಂ ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಮೊದಲನೇ ಭಾಗ ತುಂಬಾ ಜನಪ್ರೀಯವಾಗಿದೆ.