ಕೃಷ್ಣ ಹಾಗೂ ಮಿಲನ ನಾಗರಾಜ್ ಕಾಂಬಿನೇಷನ್ನಲ್ಲಿ ಬಿಡುಗಡೆಯಾದ 'ಲವ್ ಮಾಕ್ಟೇಲ್' 2020ರ ಸೂಪರ್ ಹಿಟ್ ಸಿನಿಮಾ. ಸಿನಿಮಾ ಬಿಡುಗಡೆಯಾಗಿ ಕೆಲವು ದಿನಗಳ ನಂತರ ಕೊರೊನಾ ಲಾಕ್ಡೌನ್ನಿಂದ ಚಿತ್ರಮಂದಿರಗಳು ಮುಚ್ಚಿದ ಕಾರಣ ಇದೀಗ ಮತ್ತೆ ಈ ಸಿನಿಮಾ ಬಿಡುಗಡೆಯಾಗುತ್ತಿದೆ.
'ಲವ್ ಮಾಕ್ಟೇಲ್-2' ಬಿಡುಗಡೆಗೆ ಸಮಯ ನಿಗದಿ ಮಾಡಿದ ಕೃಷ್ಣ - Krishna direction Love Mocktail 2
'ಲವ್ ಮಾಕ್ಟೇಲ್' ಯಶಸ್ವಿಯಾದ ಬೆನ್ನಲ್ಲೇ ನಿರ್ದೇಶಕ, ನಟ ಕೃಷ್ಣ ಭಾಗ 2 ತಯಾರಿಸಲು ಮುಂದಾದರು. ಲಾಕ್ಡೌನ್ ಸಮಯದಲ್ಲಿ ಸರಳವಾಗಿ ಸ್ಕ್ರಿಪ್ಟ್ ಪೂಜೆ ನೆರವೇರಿಸಿದ ಕೃಷ್ಣ ಹಾಗೂ ಮಿಲನ ನಾಗರಾಜ್ ಈಗಾಗಲೇ ಶೇ 50 ಚಿತ್ರೀಕರಣ ಮುಗಿಸಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್ನಲ್ಲಿ 'ಲವ್ ಮಾಕ್ಟೇಲ್-2' ಬಿಡುಗಡೆಗೆ ಸಮಯ ನಿರ್ಧರಿಸಿದ್ದಾರೆ.
!['ಲವ್ ಮಾಕ್ಟೇಲ್-2' ಬಿಡುಗಡೆಗೆ ಸಮಯ ನಿಗದಿ ಮಾಡಿದ ಕೃಷ್ಣ Time fixed for Love mocktail part 2](https://etvbharatimages.akamaized.net/etvbharat/prod-images/768-512-9094722-101-9094722-1602140784135.jpg)
ಇನ್ನು 'ಲವ್ ಮಾಕ್ಟೇಲ್' ಸಕ್ಸಸ್ ಆದ ಖುಷಿಯಲ್ಲಿ ಕೃಷ್ಣ ಹಾಗೂ ಮಿಲನ ನಾಗರಾಜ್ ಸೇರಿ 'ಲವ್ ಮಾಕ್ಟೇಲ್' ಸೀಕ್ವೆಲ್ ತಯಾರಿಸುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿ ಮುಗಿಸಿದ್ದ ಕೃಷ್ಣ, ಚಿತ್ರದ ಬಿಡುಗಡೆಗೆ ಸಮಯವನ್ನು ಈಗಾಗಲೇ ನಿರ್ಧರಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್ನಲ್ಲಿ ಸೀಕ್ವೆಲ್ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಕಮ್ ನಟ ಕೃಷ್ಣ ಹೇಳಿದ್ದಾರೆ. ಈಗಾಗಲೇ 'ಲವ್ ಮಾಕ್ಟೇಲ್-2' ಶೇ50 ರಷ್ಟು ಚಿತ್ರೀಕರಣ ಮುಗಿದಿದೆಯಂತೆ.
ಭಾಗ 2 ರಲ್ಲಿ ಹೊಸ ಪಾತ್ರಗಳನ್ನು ನೋಡಬಹುದು. ಮೊದಲ ಭಾಗಕ್ಕಿಂತ ಈ ಸೀಕ್ವೆಲ್ನ ಪ್ರತಿಯೊಂದು ಪಾತ್ರಗಳು ಬಹಳ ವಿಭಿನ್ನವಾಗಿ ಮೂಡಿ ಬಂದಿದೆ. ಸಿಕ್ವೇಲ್ನಲ್ಲಿ ನಿಧಿಮಾ ಪಾತ್ರ ಇರಲಿದೆಯಾ ಅಥವಾ ಫ್ಲ್ಯಾಷ್ ಬ್ಯಾಕ್ನಲ್ಲಿ ಬರಲಿದೆಯಾ ಎಂಬ ಗುಟ್ಟನ್ನು ಮಾತ್ರ ಕೃಷ್ಣ ಬಿಟ್ಟುಕೊಟ್ಟಿಲ್ಲ. ಮೊದಲ ಭಾಗದಂತೆ ಸೀಕ್ವೆಲ್ ಕೂಡಾ ಸಿನಿಪ್ರಿಯರಿಗೆ ಇಷ್ಟವಾಗಲಿದೆ ಎಂದು ಕೃಷ್ಣ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.