ತನ್ನ ಹೆಸರು ಮತ್ತು ವಿಡಿಯೋಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮಾನ ಹರಾಜು ಹಾಕಲಾಗುತ್ತಿದೆ. ಇಂತಹ ವಿಡಿಯೋಗಳನ್ನು ಡಿಲೀಟ್ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರಾಜಸ್ಥಾನ್ ಟಿಕ್ ಟಾಸ್ಟ್ ಸ್ಟಾರ್ ಮತ್ತು ಡ್ಯಾನ್ಸರ್ ಪ್ರಿಯಾ ಗುಪ್ತ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಪ್ರಿಯಾ ಗುಪ್ತ ಹೆಸರನ್ನು ಮತ್ತು ಅವರ ನಕಲಿ ವಿಡಿಯೋಗಳನ್ನು ಬಳಸಿಕೊಂಡು ಮಾಡಲಾಗಿರುವ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಜಸ್ಥಾನದಲ್ಲಿ ಪ್ರಿಯಾಗುಪ್ತ ಸೋನ ಬಾಬು ಎಂದು ಖ್ಯಾತಿ ಪಡೆದಿದ್ದಾರೆ. ಇವರು ಇತ್ತೀಚೆಗೆ ಫೇಸ್ ಬುಕ್ನಲ್ಲಿ ವಿಡಿಯೋವೊಂದನ್ನು ಹಾಕಿ, ಆ ಅಶ್ಲೀಲ ವಿಡಿಯೋದಲ್ಲಿರುವುದು ನಾನಲ್ಲ. ಆ ರೀತಿ ನಕಲಿ ವಿಡಿಯೋಗಳನ್ನು ಹರಡುತ್ತಿರುವ ಆರೋಪಿಗಳನ್ನು ಬಂಧಿಸಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.