ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಹೀರೋಪಂತಿ 2’ ಟ್ರೈಲರ್ ಗುರುವಾರ ಬಿಡುಗಡೆಯಾಗಿದೆ. ಆ್ಯಕ್ಷನ್, ಥ್ರಿಲ್ಲರ್ ಹೈ ವೋಲ್ಟೇಜ್ ಸಿನಿಮಾ ಇದಾಗಿದ್ದು, ಟೈಗರ್ ಶ್ರಾಫ್ ಸಾಹಸ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಬಬ್ಲೂ ರಾಣಾವತ್ ಪಾತ್ರದಲ್ಲಿ ಟೈಗರ್ ಶ್ರಾಫ್ ಮಿಂಚಲಿದ್ದಾರೆ. ನಟ ನವಾಜುದ್ದೀನ್ ಸಿದ್ಧಿಕಿ ಇಲ್ಲಿ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದು, ಲೈಲಾ ಎಂಬ ಸೈಬರ್ ಕ್ರಿಮಿನಲ್ ಪಾತ್ರದಲ್ಲಿ ಮೋಡಿ ಮಾಡಲಿದ್ದಾರೆ.
'ಹೀರೋಪಂತಿ 2' ಟ್ರೈಲರ್ ಬಿಡುಗಡೆ: ಟೈಗರ್ ಶ್ರಾಫ್ ಸಾಹಸ ಕಣ್ತುಂಬಿಕೊಳ್ಳಲು ಕಾಯುತ್ತಿರುವ ಫ್ಯಾನ್ಸ್ - ನಟ ನವಾಜುದ್ದೀನ್ ಸಿದ್ಧಿಕಿ
ಬಾಲಿವುಡ್ ನಟ ಟೈಗರ್ ಶ್ರಾಫ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಹೀರೋಪಂತಿ 2’ ಟ್ರೈಲರ್ ಗುರುವಾರ ಬಿಡುಗಡೆಯಾಗಿದೆ. ಆ್ಯಕ್ಷನ್, ಥ್ರಿಲ್ಲರ್ ಹೈ ವೋಲ್ಟೇಜ್ ಸಿನಿಮಾ ಇದಾಗಿದ್ದು, ಈದ್ ಹಬ್ಬದ ಪ್ರಯುಕ್ತ ಏಪ್ರಿಲ್ 29 ರಂದು ತೆರೆಕಾಣಲಿದೆ.
'ಹೀರೋಪಂತಿ 2' ಟ್ರೈಲರ್ ಬಿಡುಗಡೆ
ಟೈಗರ್‌ಗೆ ಜೋಡಿಯಾಗಿ ತಾರಾ ಸುತಾರಿಯಾ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಹಮದ್ ಖಾನ್ ನಿರ್ದೇಶನವಿದ್ದು, ಸಾಜಿದ್ ನಾಡಿಯಾಡವಾಲಾ ನಿರ್ಮಾಣವಿದೆ. 'ಹೀರೋಪಂತಿ 2' ಈದ್ ಹಬ್ಬದ ಪ್ರಯುಕ್ತ ಏಪ್ರಿಲ್ 29 ರಂದು ತೆರೆಕಾಣಲಿದೆ.