ಕರ್ನಾಟಕ

karnataka

ETV Bharat / sitara

ವೆಬ್ ಸೀರೀಸ್ ಆಗಿ ಬರಲಿದೆ ಮಾಜಿ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್​​​​​ ಕಥೆ...! - Ashok kumar story as web series

ಪ್ರತಿಷ್ಠಿತ ಸೋನಿ ಎಂಟರ್​​​ಟೈನ್ಮೆಂಟ್ ಸಂಸ್ಥೆ ಮಾಜಿ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಬರೆದ 'ಹುಲಿಯ ನೆನಪುಗಳು' ಪುಸ್ತಕದ ಹಕ್ಕನ್ನು 10 ಲಕ್ಷ ರೂಪಾಯಿಗೆ ಖರೀದಿಸಿದ್ದು ಅದರಲ್ಲಿನ ಅಶೋಕ್ ಕುಮಾರ್ ಅವರ ಕಥೆಯನ್ನು ವೆಬ್ ಸೀರೀಸ್ ಮಾಡಲು ಮುಂದಾಗಿದೆ.

Tiger Ashok kumar
ಮಾಜಿ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್

By

Published : Feb 27, 2021, 7:51 PM IST

ಪೊಲೀಸ್ ಇಲಾಖೆಯಲ್ಲಿ ಟೈಗರ್ ಎಂದೇ ಕರೆಸಿಕೊಂಡು ದಂತಚೋರ ವೀರಪ್ಪನ್ ಕಾರ್ಯಾಚರಣೆಯಲ್ಲೂ ಭಾಗವಹಿಸಿದ್ದ ಖಡಕ್ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಜೀವನ ಚರಿತ್ರೆ ವೆಬ್ ಸೀರೀಸ್ ಆಗಿ ತಯಾರಾಗಲಿದೆ. ಈ ಸೀರೀಸ್ ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ತಯಾರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾವು ಬರೆದ ಪುಸ್ತಕಗಳ ಬಗ್ಗೆ ಮಾತನಾಡಿದ ಅಶೋಕ್ ಕುಮಾರ್

ಇದನ್ನೂ ಓದಿ:ಅಶೋಕ್ ಕುಮಾರ್ ಪೊಲೀಸ್ ಇಲಾಖೆಗೆ ಬರಲು ಆ ಸಿನಿಮಾ ಸ್ಫೂರ್ತಿಯಂತೆ...!

ತಮ್ಮ ಜೀವನಚರಿತ್ರೆ ವೆಬ್ ಸೀರೀಸ್ ಆಗಿ ಬರಲಿದೆ ಎಂಬ ವಿಚಾರವನ್ನು ಸ್ವತ: ಅಶೋಕ್ ಕುಮಾರ್ ಅವರೇ ಹೇಳಿಕೊಂಡಿದ್ದಾರೆ. ಅಜಿತ್ ಜಯರಾಜ್ ನಟಿಸುತ್ತಿರುವ 'ರೈಮ್ಸ್' ಚಿತ್ರದ ಕಾರ್ಯಕ್ರಮಕ್ಕೆ ಬಂದಿದ್ದ ಅಶೋಕ್ ಕುಮಾರ್, ಚಿತ್ರರಂಗದ ನಂಟಿನ ಬಗ್ಗೆ ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡರು. ಡಾ. ರಾಜ್​​​​ ಕಾಲದಲ್ಲಿ ಇರುತ್ತಿದ್ದ ಕಥೆಗಳು ಇಂದಿನ ಚಿತ್ರಗಳಲ್ಲಿ ಕಾಣುತ್ತಿಲ್ಲ ಎಂದು ಬೇಸರ ಕೂಡಾ ವ್ಯಕ್ತಪಡಿಸಿದರು. ಅಶೋಕ್ ಕುಮಾರ್ ನಿವೃತ್ತ ಪೊಲೀಸ್ ಅಧಿಕಾರಿ ಅಷ್ಟೇ ಅಲ್ಲ, ಈಗ ಅವರು ಲೇಖಕರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಅಶೋಕ್ ಕುಮಾರ್, ಪೊಲೀಸ್ ಇಲಾಖೆಯಲ್ಲಿ ನಡೆದ ರೋಚಕ ಘಟನೆಗಳನ್ನು ಪುಸ್ತಕದ ರೂಪದಲ್ಲಿ ಹೊರ ತಂದಿದ್ದಾರೆ. 'ಪೊಲೀಸ್ ವಿಜಲ್', 'ಬುಲೆಟ್ ಸವಾರಿ' ಹಾಗೂ 'ಹುಲಿಯ ನೆನಪುಗಳು' ಎಂಬ ಪುಸ್ತಕಗಳನ್ನು ಅಶೋಕ್ ಕುಮಾರ್ ಬರೆದಿದ್ದಾರೆ. ಇದರಲ್ಲಿ 'ಹುಲಿಯ ನೆನಪುಗಳು' ಪುಸ್ತಕವನ್ನು 'ಮೊಮೊರೀಸ್ ಆಫ್ ಟೈಗರ್​​​' ಎಂದು ಇಂಗ್ಲಿಷ್​ಗೆ ಅನುವಾದ ಮಾಡಲಾಗಿದೆ. ಪ್ರತಿಷ್ಠಿತ ಸೋನಿ ಎಂಟರ್​​​​ಟೈನ್ಮೆಂಟ್ ಸಂಸ್ಥೆ 10 ಲಕ್ಷ ರೂಪಾಯಿ ನೀಡಿ ಪುಸ್ತಕದ ರೈಟ್ಸ್ ಪಡೆದು ವೆಬ್ ಸೀರಿಸ್ ತಯಾರಿಸಲು ಸಿದ್ಧವಾಗಿದೆ.

ಬುಲೆಟ್ ಸವಾರಿ, ಹುಲಿಯ ನೆನಪುಗಳು
ಮೊಮೋರೀಸ್ ಆಫ್ ಟೈಗರ್

ABOUT THE AUTHOR

...view details