ಮುಂಬೈ(ಮಹಾರಾಷ್ಟ್ರ) :ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ 3 ಸಿನಿಮಾ 2023ರ ಈದ್‌ಗೆ ಬಿಡುಗಡೆಯಾಗಲಿದೆ. ಕೊರೊನಾದಿಂದಾಗಿ ಚಿತ್ರೀಕರಣ ತಡವಾಗಿದೆ.
ಆದರೆ, ಮುಂದಿನ ವರ್ಷ ದೊಡ್ಡ ಪರದೆಯ ಮೇಲೆ ಬಿಡುಗಡೆಯಾದಾಗ ಕಾದಿದ್ದಕ್ಕೆ ಸಾರ್ಥಕ ಅನಿಸುವಂತೆ ಸಿನಿಮಾ ತಯಾರಾಗಿದೆ ಎಂದು ನಿರ್ದೇಶಕ ಮನೀಶ್ ಶರ್ಮಾ ಭರವಸೆ ನೀಡಿದ್ದಾರೆ.
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ 3 ನಿರ್ದೇಶನದ ಜವಾಬ್ದಾರಿ ನೀಡಿದಾಗ, ಒಬ್ಬ ಹೈ-ಆಕ್ಟೇನ್ ಆ್ಯಕ್ಷನ್ ಹೀರೋಗಾಗಿ ಹೊಸ ಬೆಂಚ್ಮಾರ್ಕ್ ನಿರ್ಮಾಣ ಮಾಡುವ ದೃಷ್ಟಿಕೋನ ನನ್ನಲ್ಲಿತ್ತು.
ಅದರ ಅಧಿಕಾರವನ್ನು ನನ್ನ ಕೈಗೊಪ್ಪಿಸಿದಾಗ ಈ ಸಿನಿಮಾವನ್ನು ಮಾಸ್ ಹಿಟ್ ಮಾಡಬೇಕೆಂಬುದೊಂದೇ ನನ್ನ ಯೋಚನೆಯಲ್ಲಿತ್ತು. ಒಂದು ಒಳ್ಳೆಯ ಸಿನಿಮಾವನ್ನು ನೋಡಬೇಕಾದರೆ ಕಾಯಲೇಬೇಕು. ಕಾದದ್ದು ಸಾರ್ಥಕವೆನಿಸುವಂತೆ ಸಿನಿಮಾ ತಯಾರಾಗಿದೆ ಎಂದು ನಿರ್ದೇಶಕರು ಹೇಳಿದರು.
ಚಿತ್ರವು 2023ರ ಏಪ್ರಿಲ್ 21ರಂದು ಬಿಡುಗಡೆಯಾಗಲಿದೆ. ಟೈಗರ್ 3 ಸಿನಿಮಾ ಫ್ರಾಂಚೈಸಿಯ 3ನೇ ಭಾಗ. ಇದನ್ನು ಮನೀಶ್ ಶರ್ಮಾ ನಿರ್ದೇಶಿಸಿದ್ದಾರೆ. ಮೊದಲ ಕಂತು ಏಕ್ ಥಾ ಟೈಗರ್ 2012ರಲ್ಲಿ ಬಿಡುಗಡೆಯಾಗಿತ್ತು. ಅದನ್ನ ಕಬೀರ್ ಖಾನ್ ನಿರ್ದೇಶಿಸಿದ್ದರು. 2ನೇ ಭಾಗ ಟೈಗರ್ ಜಿಂದಾ ಹೈ 2017ರಲ್ಲಿ ಬಿಡುಗಡೆಯಾಗಿತ್ತು. ಆ ಚಿತ್ರವನ್ನ ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ್ದರು.