ಮುಂಬೈ: ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ನಟಿ ಕತ್ರಿನಾ ಕೈಫ್ ಆಗಸ್ಟ್ 18 ರಂದು ರಷ್ಯಾಕ್ಕೆ ಪಯಣ ಬೆಳೆಸಿದ್ದಾರೆ. ಕೊರೊನಾದಿಂದಾಗಿ ತಡೆ ಹಿಡಿಯಲಾಗಿದ್ದ ಸ್ಪೈ ಥ್ರಿಲ್ಲರ್ ಟೈಗರ್ 3 ರ ದೃಶ್ಯಗಳನ್ನು ಚಿತ್ರೀಕರಿಸಲಿದ್ದಾರೆ.
45 ದಿನಗಳ ವೇಳಾಪಟ್ಟಿಯಲ್ಲಿ ಆಕ್ಷನ್ ಸೀಕ್ವೆನ್ಸ್‌ಗಳನ್ನು ಚಿತ್ರೀಕರಣ ಮಾಡಲಾಗಿದೆ ಮತ್ತು ಸಲ್ಮಾನ್ ಮತ್ತು ಕತ್ರಿನಾ ಆಸ್ಟ್ರಿಯಾ ಮತ್ತು ಟರ್ಕಿ ಸೇರಿದಂತೆ ಕನಿಷ್ಠ 5 ಅಂತಾರಾಷ್ಟ್ರೀಯ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಿದ್ದಾರೆ.
ವೈಆರ್‌ಎಫ್ ಮುಖ್ಯಸ್ಥ ಗೌರವ ಆದಿತ್ಯ ಚೋಪ್ರಾ ಅವರು ಜಂಬೋ ಚಾರ್ಟರ್ ಮೂಲಕ ಸಿನಿಮಾನ ಎಲ್ಲ ಸಿಬ್ಬಂದಿಯನ್ನು ವಿದೇಶಕ್ಕೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಲ್ಮಾನ್, ಕತ್ರಿನಾ, ನಿರ್ದೇಶಕ ಮನೀಶ್ ಶರ್ಮಾ ಸೇರಿದಂತೆ ಎಲ್ಲರನ್ನೂ ವಿದೇಶದಕ್ಕೆ ಕಳುಹಿಸಲಾಗುತ್ತಿದೆ. ಚಿತ್ರೀಕರಣವು ಸುಗಮವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಮನೀಶ್ ನೇತೃತ್ವದ ನಿರ್ದೇಶನ ತಂಡವು ಈ ವೇಳಾಪಟ್ಟಿಗಾಗಿ ತಿಂಗಳುಗಳ ಕಾಲ ಸಿದ್ಧತೆ ನಡೆಸಿದೆ.
ಮೂಲಗಳ ಪ್ರಕಾರ, ಸಲ್ಮಾನ್ ಮತ್ತು ಕತ್ರಿನಾ ಮೊದಲು ರಷ್ಯಾಕ್ಕೆ ಬಂದಿಳಿಯುತ್ತಾರೆ. ನಂತರ ಟರ್ಕಿ ಮತ್ತು ಆಸ್ಟ್ರಿಯಾದಲ್ಲಿ ಶೂಟಿಂಗ್ ಸ್ಥಳಗಳಿಗೆ ಹೋಗುತ್ತಾರೆ. ಟೈಗರ್ 3 ಕತ್ರಿನಾ ಕೈಫ್ , ಸಲ್ಮಾನ್ ಖಾನ್ ಅಭಿನಯದ ಸ್ಪೈ ಥ್ರಿಲ್ಲರ್ ಫ್ರಾಂಚೈಸಿ ಮೂರನೇ ಭಾಗವಾಗಿದೆ. 2012 ರಲ್ಲಿ ಕಬೀರ್ ಖಾನ್ ನಿರ್ದೇಶನದ ಮೊದಲ ಕಂತಿನ ಏಕ್ ಥಾ ಟೈಗರ್ ಬಿಡುಗಡೆಯಾಯಿತು. ಎರಡನೆಯದು ಟೈಗರ್ ಜಿಂದಾ ಹೈ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಇದನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ್ದಾರೆ.