ಮುಂಬೈ : ಬಾಲಿವುಡ್ನ ಖ್ಯಾತ ಟೆಲಿವಿಷನ್ ನಟಿ ಊರ್ವಶಿ ಡೋಲಾಕಿಯ ತಮಗೆ ಕೊರೊನಾ ಬಂದು, ಅದರಿಂದ ಗುಣಮುಖರಾಗಿರುವ ವಿಚಾರವನ್ನು ತಡವಾಗಿ ಹೇಳಿಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಕಳೆದ ಕೆಲವು ದಿನಗಳಿಂದ ಕೊರೊನಾದಿಂದ ತತ್ತರಿಸಿದ್ದೆ ಎಂದಿದ್ದಾರೆ.
ಕಳೆದ 25 ದಿನಗಳಿಂದ ನಾನು ಕೆಲಸದಲ್ಲಿ ತೊಡಗಿಕೊಂಡಿಲ್ಲ. ಆದ್ರೆ ನನ್ನ ಜೀವನ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಮಾಡಿದ್ದೇನೆ. ನನಗೆ ಕೊರೊನಾ ಬಂದ ಕಾರಣವನ್ನು ಯಾರ ಬಳಿಯೂ ಹೇಳಿಕೊಳ್ಳಲಿಲ್ಲ. ಯಾಕೆಂದರೆ ನಾನು ಈ ಸೋಂಕಿನ ವಿರುದ್ಧ ಶಕ್ತಿಯುತವಾಗಿ ಹೋರಾಡಿ ಗೆಲ್ಲಬೇಕಾಗಿತ್ತು ಎಂದಿದ್ದಾರೆ.
ಸದ್ಯ ನಾನು ಕೊರೊನಾದಿಂದ ಗುಣಮುಖಳಾಗಿದ್ದು ಎಲ್ಲರಿಗೂ ಈ ಮಾಹಿತಿಯನ್ನು ಹೇಳಲು ಇಚ್ಚಿಸುತ್ತೇನೆ ಎಂದಿದ್ದಾರೆ. ಊರ್ವಶಿ ಜನಪ್ರಿಯ ಟೆಲಿವಿಷನ್ ಶೋ ಆದ ಕಾಸೌಟಿ ಜಿಂದಗಿ ಕೇ ಇಂದ ಪ್ರಸಿದ್ಧಿ ಪಡೆದಿದ್ದರು.
ಇನ್ನು ತಮ್ಮ ಕೊರೊನಾ ಕಾಲದ ಬಗ್ಗೆ ಹೇಳಿಕೊಂಡಿದ್ದು, ಅದೊಂದು ಕಠಿಣ ಸಮಯ ಎಂದಿದ್ದಾರೆ. ನಾಣು ಇದೀಗ ಧನಾತ್ಮಕವಾಗಿದ್ದೇನೆ. ಕೊರೊನಾ ನನಗೆ ಮತ್ತು ನನ್ನ ಆರೋಗ್ಯಕ್ಕೆ ಸವಾಲಾಗಿತ್ತು ಎಂದು ಬರೆದಿದ್ದಾರೆ.