ಕರ್ನಾಟಕ

karnataka

ETV Bharat / sitara

ನಾಳೆ 'ಬೆಲ್ ಬಾಟಂ' ಹಾಕ್ಕೊಂಡು 'ಗಹನ'ವಾದ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ನೋಡಲು ಬನ್ನಿ - ಬೆಲ್ ಬಾಟಂ

ಈ ವಾರ ಬಿಡುಗಡೆಯಾಗುತ್ತಿರುವ ಮೂರು ಸಿನಿಮಾಗಳನ್ನು ಸೇರಿಸಿದರೆ ಮೇಲಿನ ಶೀರ್ಷಿಕೆ ರೂಪಗೊಳ್ಳುತ್ತದೆ. ಬೆಲ್ ಬಾಟಂ, ಗಹನ ಹಾಗೂ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರಗಳು ನಾಳೆ ರಿಲೀಸ್ ಆಗುತ್ತಿವೆ.

ಬೆಲ್ ಬಾಟಂ, ಗಹನ ಹಾಗೂ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರಗಳು ನಾಳೆ ರಿಲೀಸ್ ಆಗುತ್ತಿವೆ.

By

Published : Feb 14, 2019, 1:16 PM IST

'ಬೆಲ್ ಬಾಟಂ' ಈಗಾಗಲೇ ಅತ್ಯಂತ ಕುತೂಹಲ ಹೆಚ್ಚಿಸಿರುವ ಚಿತ್ರ. ಅದಕ್ಕೆ ಕಾರಣ ನಿರ್ದೇಶ ಜಯತೀರ್ಥ, ನಟ ರಿಷಭ್​ ಶೆಟ್ಟಿ ಹಾಗೂ ಮುದ್ದಾದ ನಟಿ ಹರಿಪ್ರಿಯಾ. ಈ ಚಿತ್ರದಲ್ಲೆ ಐದು ನಿರ್ದೇಶಕರುಗಳ ಸಂಗಮ ಸಹ ಆಗಿದೆ.

ಜಯತೀರ್ಥ, ರಿಷಭ್​​ ಶೆಟ್ಟಿ, ಯೋಗರಾಜ್ ಭಟ್, ಶಿವಮಣಿ, ದಿನೇಶ್​ ಮಂಗಳೂರು ವೃತ್ತಿ ಜೀವನದಲ್ಲಿ ನುರಿತ ನಿರ್ದೇಶಕರುಗಳು. ದಯಾನಂದ ಟಿ.ಕೆ ಕಥೆಗೆ ರಘು ನಿಡುವಲ್ಲಿ ಸಂಭಾಷಣೆ ಬರೆದಿರುವ ‘ಬೆಲ್ ಬಾಟಂ’ 80 ರ ದಶಕಕ್ಕೆ ಕೊಂಡೊಯ್ಯುತ್ತದೆ. ಗೋಲ್ಡನ್ ಹಾರ್ಸ್ ಸಿನಿಮಾದಲ್ಲಿ ಸಂತೋಷ್ ಕುಮಾರ್ ಕೆ.ಸಿ ನಿರ್ಮಾಣ ಮಾಡಿದ್ದಾರೆ. ಅಜನೀಶ್​ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್​ ಸಂಕಲನ, ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರೀ, ಪಿ.ಡಿ ಸತೀಶ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಬೆಲ್ ಬಾಟಂ ಚಿತ್ರ

'ಕೆಮಿಸ್ಟ್ರಿ ಆಫ್ ಕರಿಯಪ್ಪ' ಡಾ.ಮಂಜುನಾಥ್ ಡಿ ಎಸ್ ಅವರ ಎರಡನೇ ಸಿನಿಮಾ. ಈ ಹಾಸ್ಯ ಮಿಶ್ರಿತ ಸಿನಿಮಾ ಹೆಚ್ಚು ಬೇಡಿಕೆಯನ್ನು ಕುದುರಿಸಿಕೊಂಡಿದೆ. ಕಿರಿಕ್ ಪಾರ್ಟಿ ಚಿತ್ರದಲ್ಲಿ ಅಭಿನಯಿಸಿದ ಚಂದನ್ ಆಚಾರ್ ಈ ಚಿತ್ರದಲ್ಲಿ ನಾಯಕ. ಸಂಜನಾ ನಾಯಕಿ ಆಗಿ ಮೊದಲ ಚಿತ್ರ. ತಬಲಾ ನಾಣಿ ಜೋಡಿ ಆಗಿ ಅಪೂರ್ವ ಅಭಿನಯಿಸಿದ್ದಾರೆ. ನಿರ್ದೇಶಕ ಕುಮಾರ್ ಅವರು ಮಂಡ್ಯ ಬಳಿ ನಡೆದ ನಿಜ ಜೀವನದ ಕಥೆಗೆ ಚಿತ್ರಕಥೆ ಬರೆದು ಸಂಭಾಷಣೆ, ಗೀತ ಸಾಹಿತ್ಯ ಸಹ ರಚಿಸಿದ್ದಾರೆ. ಶಿವ ಶೀನ ಛಾಯಾಗ್ರಹಣ ಮತ್ತು ಆರವ್ ರಿಶಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀನಿವಾಸಮೂರ್ತಿ, ಸುಚಿಂದ್ರ ಪ್ರಸಾದ್, ಡಾ ಮಂಜುನಾಥ್, ಮೈಕೊ ನಾಗರಾಜ್, ರಾಕ್ಲೈನ್ ಸುಧಾಕರ್, ಹನುಮಂತೆ ಗೌಡ, ಪ್ರಣಯಮೂರ್ತಿ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ

'ಗಹನ', ಇದು 150 ಸಿನಿಮಾಗಳಿಗೆ ಸ್ಟಿಲ್ ಫೊಟೋಗ್ರಾಫರ್ ಆಗಿದ್ದ ಆರ್.ಶ್ರೀನಿವಾಸ್ (ಸ್ಟೀಲ್ ಸೀನು) ನಿರ್ಮಾಣದ ಚಿತ್ರ. ‘ಗಹನ’ ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಒಳಗೊಂಡಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಪ್ರೀತ್ ಹಾಸನ್ ಮಾಡಿದ್ದಾರೆ. ಸಾಯಿ ಶ್ರೀನಿವಾಸ್ ಛಾಯಾಗ್ರಹಣ, ರಘು ಸಂಗೀತ ನೀಡಿದ್ದಾರೆ. ಆದಿತ್ಯ ಶೆಟ್ಟಿ, ಶರಣ್ಯ ಗೌಡ, ರಂಜಿನಿ, ಶಿವು, ಇಂಚರ, ಭೀಮಯ್ಯ, ಸ್ವಾತಿ ಶಿವಮೊಗ್ಗ, ಸುನಿಲ್ ಗೌಡ, ಸುಭಾಷ್ ಚಂದ್ರ, ಸ್ವಾತಿ ಕೊಡಗು ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಗಹನ ಚಿತ್ರ

ABOUT THE AUTHOR

...view details